ಬಿ.ಸಿ.ರೋಡು : ಸಮಸ್ತ ಕರ್ನಾಟಕ ಮುಶಾವರ ಸಮಿತಿಯ ನೂತನ ಕಚೇರಿ ಉದ್ಘಾಟನೆ - Karavali Times ಬಿ.ಸಿ.ರೋಡು : ಸಮಸ್ತ ಕರ್ನಾಟಕ ಮುಶಾವರ ಸಮಿತಿಯ ನೂತನ ಕಚೇರಿ ಉದ್ಘಾಟನೆ - Karavali Times

728x90

5 October 2022

ಬಿ.ಸಿ.ರೋಡು : ಸಮಸ್ತ ಕರ್ನಾಟಕ ಮುಶಾವರ ಸಮಿತಿಯ ನೂತನ ಕಚೇರಿ ಉದ್ಘಾಟನೆ

 ಬಂಟ್ವಾಳ, ಅಕ್ಟೋಬರ್ 05, 2022 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ತಲಪಾಡಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಆರಂಭಿಸಲಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಸಮಿತಿಯ ನೂತನ ಕಚೇರಿಯನ್ನು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯಿದುಲ್ ಉಲಮಾ ಶೈಖುನಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತು ಕೋಯ ತಂಙಳ್ ಇತ್ತೀಚೆಗೆ ಉದ್ಘಾಟಿಸಿದರು.

ಸಮಸ್ತ ಕರ್ನಾಟಕ ಮುಶಾವರ ಸಮಿತಿ ಅಧ್ಯಕ್ಷ ಸಯ್ಯಿದ್ ಎನ್ ಪಿ ಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಮುಖ್ಯ ಭಾಷಣಗೈದರು. ಕಾರ್ಯಾಧ್ಯಕ್ಷ ಇಬ್ರಾಹಿಂ ಬಾಖವಿ ಕೆ ಸಿ ರೋಡು ಮರ್‍ಹೂಂ  ಶೈಖುನಾ ಮಿತ್ತಬೈಲು ಉಸ್ತಾದರ ಮಖ್‍ಬರ ಝಿಯಾರತಿಗೆ ನೇತೃತ್ವ ನೀಡಿದರು. ಕೋಶಾಧಿಕಾರಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ ಮೌಲಿದ್ ಪಾರಾಯಣಕ್ಕೆ ನೇತೃತ್ವ ನೀಡಿದರು. 

ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಪ್ರಮುಖರಾದ ಅಬ್ದುಲ್ ಸತ್ತಾರ್ ಪಂದಲ್ಲೂರ್, ಜಂ-ಇಯ್ಯತುಲ್ ಮುದರ್ರಿಸೀನ್ ಜಿಲ್ಲಾಧ್ಯಕ್ಷ ಕೆ ಎಂ ಉಸ್ಮಾನುಲ್ ಫೈಝಿ ತೋಡಾರು, ಮದರಸ ವಿದ್ಯಾಭ್ಯಾಸ ಮಂಡಳಿ ಕೇಂದ್ರ ಸಮಿತಿ ಸದಸ್ಯರಾದ ಶರೀಫ್ ಫೈಝಿ ಕಡಬ, ಮೂಸಲ್ ಫೈಝಿ ಮಿತ್ತೂರು, ಸಯ್ಯಿದ್ ಹುಸೈನ್ ಬಾಅಲವೀ ತಂಙಳ್ ಕುಕ್ಕಾಜೆ,  ಇಸ್ಮಾಯಿಲ್ ಫೈಝಿ ಸೂರಿಂಜೆ, ಅಬೂಬಕರ್ ಸಿದ್ದೀಕ್ ದಾರಿಮಿ ಕಡಬ, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಜಂ-ಇಯ್ಯತುಲ್ ಖುತಬಾ ಜಿಲ್ಲಾಧ್ಯಕ್ಷ ಅಬ್ಬಾಸ್ ದಾರಿಮಿ ಕೆಲಿಂಜ, ಕೆ ಎಲ್ ಉಮರ್ ದಾರಿಮಿ ಪಟ್ಟೋರಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಕೆ.ಎಂ ಕಾಸಿಂ ದಾರಿಮಿ ಸವಣೂರು, ಉಮರ್ ಫೈಝಿ ಸಾಲ್ಮರ, ಅಶ್ರಫ್ ಫೈಝಿ ಮಿತ್ತಬೈಲು, ಕುಕ್ಕಿಲ ಅಬ್ದುಲ್ ಖಾದಿರ್ ದಾರಿಮಿ ವಳಚ್ಚಿಲ್, ಆದಂ ದಾರಿಮಿ ಅಜ್ಜಿಕಟ್ಟೆ, ಕೆ ಪಿ ಇರ್ಷಾದ್ ದಾರಿಮಿ ಮಿತ್ತಬೈಲು, ಪಿ ಎಂ ಉಮರ್ ದಾರಿಮಿ ಸಾಲ್ಮರ, ಎಸ್ ಬಿ ಮುಹಮ್ಮದ್ ದಾರಿಮಿ, ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯ ಸಮಿತಿ ಕಾರ್ಯದರ್ಶಿ ಅನೀಸ್ ಕೌಸರಿ, ಈಸ್ಟ್ ಜಿಲ್ಲಾಧ್ಯಕ್ಷ ತಾಜುದ್ದೀನ್ ರಹ್ಮಾನಿ ಮಳಲಿ, ಕೆ ಬಿ ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ, ಅಬ್ದುಲ್ ಕರೀಂ ದಾರಿಮಿ, ಮದರಸಾ ಮ್ಯಾನೇಜ್‍ಮೆಂಟ್ ಪ್ರಮುಖರಾದ ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಅಬೂಬಕರ್ ಮುಲಾರ್, ಹನೀಫ್ ದಾರಿಮಿ ಸವಣೂರು, ಮುಹಮ್ಮದ್ ಸಾಗರ್, ಶರೀಫ್ ದಾರಿಮಿ ಉದ್ದಬೆಟ್ಟು, ಉಸ್ಮಾನ್ ದಾರಿಮಿ ಫರಂಗಿಪೇಟೆ, ಅಬ್ದುಲ್ ಮಜೀದ್ ಹಾಜಿ ಸಿತಾರ್, ಇಸ್ಮಾಯಿಲ್ ದಾರಿಮಿ ನಾಳ, ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ, ಹಾಜಿ ರಿಯಾಝುದ್ದೀನ್ ಬಂದರ್, ಖಾದರ್ ಮಾಸ್ಟರ್ ಬಂಟ್ವಾಳ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಸಮಸ್ತ ಕರ್ನಾಟಕ ಮುಶಾವರ ಸಮಿತಿಯ ನೂತನ ಕಚೇರಿ ಉದ್ಘಾಟನೆ Rating: 5 Reviewed By: karavali Times
Scroll to Top