ವಿದ್ಯಾರ್ಥಿಯ ದೈಹಿಕ, ಮಾನಸಿಕ ವಿಕಾಸಕ್ಕೆ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿ : ಡಾ ಸುಯೋಗವರ್ಧನ್ - Karavali Times ವಿದ್ಯಾರ್ಥಿಯ ದೈಹಿಕ, ಮಾನಸಿಕ ವಿಕಾಸಕ್ಕೆ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿ : ಡಾ ಸುಯೋಗವರ್ಧನ್ - Karavali Times

728x90

9 October 2022

ವಿದ್ಯಾರ್ಥಿಯ ದೈಹಿಕ, ಮಾನಸಿಕ ವಿಕಾಸಕ್ಕೆ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿ : ಡಾ ಸುಯೋಗವರ್ಧನ್

ಬಂಟ್ವಾಳ, ಅಕ್ಟೋಬರ್ 09, 2022 (ಕರಾವಳಿ ಟೈಮ್ಸ್) : ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಯ ಬದುಕಿಗೆ ನಾಯಕತ್ವ ಗುಣ ಬೆಳೆಸುವ ಒಂದು ವೇದಿಕೆ ಎಂದು ಬಂಟ್ವಾಳ ಎಸ್ ವಿ ಎಸ್ ಕಾಲೇಜು ಪ್ರಾಂಶುಪಾಲ ಡಾ ಸುಯೋಗವರ್ಧನ್ ಡಿ ಎಂ ಹೇಳಿದರು.

ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಬಂಟ್ವಾಳ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನ  ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2022-23ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎನ್ನೆಸ್ಸೆಸ್ ವಿದ್ಯಾರ್ಥಿಯ ಸುಪ್ತ ಮನಸ್ಸಿನಲ್ಲಿರುವ ನಾಯಕತ್ವ ಗುಣಕ್ಕೆ ನಿರ್ದಿಷ್ಟ ರೂಪ ಕೊಟ್ಟು ಹೃದಯದಲ್ಲಿ ಚಿರಕಾಲ ಉಳಿಯುವಂತೆ ಮಾಡುತ್ತದೆ. ಶಿಬಿರ ಬದುಕಿನಲ್ಲಿ ಶಿಸ್ತು ಬೆಳೆಸಲು ಪ್ರೇರೇಪಿಸುತ್ತದೆ. ಎನ್ನೆಸ್ಸೆಸ್ ಶಿಬಿರದಲ್ಲಿ ಪಡೆದ ಅವಕಾಶಗಳನ್ನು ಜೀವನುದ್ದಕ್ಕೂ ಆಳವಡಿಸಿಕೊಂಡು ಸ್ವಾವಲಂಬನೆ ಬದುಕಿಗೆ ಹೆಚ್ಚಿನ ಒತ್ತು ಕೊಟ್ಟು ನಾಯಕತ್ವÀ ಗುಣ ಬೆಳವಣಿಗೆ ಜತೆ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದರು. 

ರಾಯಿ ಗ್ರಾ ಪಂ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಯ ಬದುಕನ್ನು ಅರ್ಥ ಮಾಡಿಕೊಳ್ಳುವುದರ ಜತೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ, ಮಾನಸಿ, ವ್ಯಕ್ತಿತ್ವವನ್ನು ವಿಕಾಸಗೊಳಿಸುವ ಕೆಲಸ ಮಾಡುತ್ತದೆ ಎಂದರು.

ಕಾಲೇಜು ಪ್ರಾಂಶುಪಾಲೆ ಮತ್ತು ಶಿಬಿರದ ನಿರ್ದೇಶಕಿ ಭಾರತಿ ಪಿ, ರಾಯಿ ಗ್ರಾ ಪಂ ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಕೊಯಿಲ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸೌಮ್ಯ ಎಚ್, ಎನ್ನೆಸ್ಸೆಸ್ ಘಟಕ ನಾಯಕರಾದ ಸಂಕೇತ್, ವೈಢೂರ್ಯ ಮೊದಲಾದವರು ಭಾಗವಹಿಸಿದ್ದರು. 

ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ, ಶಿಬಿರ ನಿರ್ದೇಶಕ ಪ್ರದೀಪ್ ಪೂಜಾರಿ, ಉಪನ್ಯಾಸಕರಾದ ಚಂದ್ರಿಕಾ ಆರ್ ರಾವ್, ವಿಜೇತ, ಲಕ್ಷ್ಮೀನಾರಾಯಣ ಕೆ, ಗಣೇಶ್, ಬೋಧಕೇತರ ಸಿಬ್ಬಂದಿಗಳಾದ ಗಣೇಶ್ ಆರ್, ತಿಮ್ಮಪ್ಪ ಕೆ, ಧರ್ನಪ್ಪ, ರಜನಿ, ಲೀಲಾ ಮೊದಲಾದವರು ಉಪಸ್ಥಿತರಿದ್ದರು.

ಸಹ ಶಿಬಿರಾಧಿಕಾರಿಗಳಾದ ಗೀತಾ ಯು, ನಮಿತಾ ಬಿ ಎಲ್, ಸುದರ್ಶನ್ ಬಿ, ರಮ್ಯಶ್ರೀ, ರೂಪಾ  ಸಹಕರಿಸಿದರು. ಶಿಬಿರಾರ್ಥಿ ಕೀರ್ತನಾ ಶಿಬಿರದ ವರದಿ ವಾಚಿಸಿದರು. ಶಿಬಿರಾರ್ಥಿ ವೈಢೂರ್ಯ ಮತ್ತು  ಸಂಗಮೇಶ  ಅನಿಸಿಕೆ ಅಭಿವ್ಯಕ್ತಪಡಿಸಿದರು. 

ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಆಶಯ ಗೀತೆ ಹಾಡಿದರು. ಉಪನ್ಯಾಸಕಿ ಚೇತನಾ ಎ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರಾಧಿಕಾರಿ ಶಶಿಧರ್ ಎಸ್ ವಂದಿಸಿದರು. ಸಹ ಶಿಬಿರಾಧಿಕಾರಿ ಭವಿತ ಕೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಯ ದೈಹಿಕ, ಮಾನಸಿಕ ವಿಕಾಸಕ್ಕೆ ಎನ್ನೆಸ್ಸೆಸ್ ಶಿಬಿರಗಳು ಸಹಕಾರಿ : ಡಾ ಸುಯೋಗವರ್ಧನ್ Rating: 5 Reviewed By: karavali Times
Scroll to Top