ಬೆಂಗಳೂರು, ಅಕ್ಟೋಬರ್ 29, 2022 (ಕರಾವಳಿ ಟೈಮ್ಸ್) : 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಶನಿವಾರ ಪ್ರಕಟಿಸಿದ್ದು, ಪಟ್ಟಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 28ರವರೆಗೆ ಅವಕಾಶ ನೀಡಲಾಗಿದೆ.
ತಾತ್ಕಾಲಿಕ ವೇಳಾಪಟ್ಟಿಯಂತೆ ಎಪ್ರಿಲ್ 1 ರಿಂದ 15 ರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಎಪ್ರಿಲ್ 1 ರಂದು ಪ್ರಥಮ ಭಾಷೆ, ಎಪ್ರಿಲ್ 4 ರಂದು ಗಣಿತ, ಎಪ್ರಿಲ್ 6 ರಂದು ದ್ವಿತೀಯ ಭಾಷೆ, ಎಪ್ರಿಲ್ 10 ರಂದು ವಿಜ್ಞಾನ, ಎಪ್ರಿಲ್ 12 ರಂದು ತೃತೀಯ ಭಾಷೆ, ಎಪ್ರಿಲ್ 15 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ ಎಂದು ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ.
0 comments:
Post a Comment