ಬಂಟ್ವಾಳ, ಅಕ್ಟೋಬರ್ 04, 2022 (ಕರಾವಳಿ ಟೈಮ್ಸ್) : 2025ಕ್ಕೆ ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿಟ್ಟಿದ್ದು ಸೇವಾ ಸಂಸ್ಥೆಗಳು ಕ್ಷಯ ರೋಗಿಗಳನ್ನು ದತ್ತು ಪಡೆದು ಆರೈಕೆ ಮಾಡುವಂತೆ ನೀಡಿರುವ ಕರೆಯಂತೆ ಕ್ಷಯ ರೋಗಿಗಳಿಗೆ ವರದಾನವಾಗಿರುವ ನಿಕ್ಷಯ ಮಿತ್ರ ಯೋಜನೆಯಂಗವಾಗಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನವು ಮಂಗಳೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ಕೆಲ ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದು, ಸೋಮವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷಯ ರೋಗಿಗಳಿಗೆ ಧವಸ ಧಾನ್ಯ ಸೇರಿದಂತೆ ಆಹಾರ ಕಿಟ್ ವಿತರಿಸಲಾಯಿತು.
ಜಿ ಪಂ ಮಾಜಿ ಸದಸ್ಯ ರವೀಂದ್ರ ಕಂಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ ಆರ್ ನಾಯರ್, ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಆನ್ಸಿಲಾ ಪತ್ರಾವೋ, ಮಹೇಶ್ ತುಪ್ಪೆಕಲ್ಲು, ನಾರಾಯಣ ಬಡ್ಡೂರು, ಕಂಪ ಸದಾನಂದ ಆಳ್ವ, ಆರೋಗ್ಯ ಸಹಾಯಕಿ ರೋಹಿಣಿ, ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿಗಳಾದ ಕೃಷ್ಣ ಕುಮಾರ್ ಪೂಂಜಾ, ತಾರಾನಾಥ ಕೊಟ್ಟಾರಿ, ಪ್ರಶಾಂತ್ ತುಂಬೆ, ಸುಕೇಶ್ ಶೆಟ್ಟಿ ತೇವು, ಭಾಸ್ಕರ ಚೌಟ, ಉಮೇಶ್ ಶೆಟ್ಟಿ ಬರ್ಕೆ, ವಿಕ್ರಂ ಬರ್ಕೆ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕರ್ತರು ಭಾಗವಹಿಸಿದ್ದರು.
0 comments:
Post a Comment