ಪುತ್ತೂರು, ಅಕ್ಟೋಬರ್ 18, 2022 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಯ್ಯೂರು, ಮಾಡಾವು, ಕಟ್ಟತ್ತಾರು ಪ್ರದೇಶಗಳಲ್ಲಿ 2021 ಜುಲೈ ತಿಂಗಳಲ್ಲಿ ನಡೆದ ಸರಣಿ ಮನೆ ಕಳವು ಪ್ರಕರಣದ ಬೆನ್ನು ಹತ್ತಿದ ಪುತ್ತೂರು ಗ್ರಾಮಾಂತರ ಪಿಎಸ್ಸೈಗಳಾದ ಉದಯರವಿ ಎಂ ಹಾಗೂ ರಾಮಕೃಷ್ಣ ನೇತೃತ್ವದ ಪೊಲೀಸರು ಅಂತರಾಜ್ಯ ಮನೆ ಕಳವು ಚೋರ ಕೇರಳದ ಕಣ್ಣೂರು ಜಿಲ್ಲೆಯ ಆಲಕ್ಕೋಡ್ ಗ್ರಾಮದ, ಕುಟ್ಟಪರಂಬ್ ಅಂಚೆ ವ್ಯಾಪ್ತಿಯ, ಕೊಲ್ಲಂಪರಂಬಿಲ್ ನಿವಾಸಿ ಯೂಸುಫ್ ಎಂಬವರ ಮಗ ಮುಹಮ್ಮದ್ ಕೆ ಯು (42) ಎಂಬಾತನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯ ವಿಚಾರಣೆಯ ವೇಳೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರು ಹಾಗೂ ಬೆಳಂದೂರಿನ ಪಳ್ಳತ್ತಾರು ಎಂಬಲ್ಲಿ ನಡೆದ ಮನೆ ಕಳವು ಹಾಗೂ ಬಂಟ್ವಾಳ, ವಿಟ್ಲ, ಪೂಂಜಾಲಕಟ್ಟೆ, ಕೊಣಾಜೆ ಠಾಣಾ ವ್ಯಾಪ್ತಿಯಲ್ಲೂ ಮನೆ ಕಳವು ನಡೆಸಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಈತನ ವಿರುದ್ದ ಕೇರಳದಲ್ಲಿ ಈಗಾಗಲೇ 120ಕ್ಕೂ ಹೆಚ್ಚು ಮನೆ ಕಳವು ಪ್ರಕರಣಗಳು ದಾಖಲಾಗಿವೆ.
ಬಂಧಿತ ಆರೋಪಿಯಿಂದ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
0 comments:
Post a Comment