ಬಂಟ್ವಾಳ, ಅಕ್ಟೋಬರ್ 29, 2022 (ಕರಾವಳಿ ಟೈಮ್ಸ್) : ತಾಲೂಕಿನ ಸುರಿಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಾಷ್ಟ್ರ ಮಟ್ಟದ ಪರಿಸರ ಪ್ರಶಸ್ತಿ ದೊರೆಯಲು ಕಾರಣಕರ್ತರಾಗಿದ್ದು, ಇತ್ತೀಚೆಗೆ ನಿಧನರಾದ ಎಸ್ ಎಂ ಅಬೂಬಕ್ಕರ್ ಅವರುಗೆ ಸುರಿಬೈಲ್ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನುಡಿ ನಮನ ಕಾರ್ಯಕ್ರಮ ನಡೆಯಿತು.
ಸುರಿಬೈಲು ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದ ಪರ ವಿಶೇಷ ಕಾಳಜಿ ಹೊಂದಿದ್ದು, ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷರಾಗಿ, ವೆಲೊರೆಡ್ ಸದಸ್ಯರಾಗಿ, ಜಿಲ್ಲೆಯ ಶಿಕ್ಷಕ ಸಂಘಟನೆಯಲ್ಲಿ ಮಾರ್ಗದರ್ಶಕರಾಗಿ, ಸುರಿಬೈಲ್ ಮಸೀದಿ ಆಡಳಿತ ಸಮಿತಿಯ ಕಾರ್ಯದರ್ಶಿಯಾಗಿ, ರಾಷ್ಟ್ರ ಮಟ್ಟದ ಪರಿಸರ ಪ್ರಶಸ್ತಿ ಪಡೆಯಲು ಕಾರಣೀಕರ್ತರಾದ ಎಸ್ ಎಂ ಅಬೂಬಕ್ಕರ್ ಸುರಿಬೈಲ್ ಅವರ ಸೇವೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಸ್ಮರಿಸಿಕೊಂಡರು. ನಾನು ಸಚಿವನಾಗಿದ್ದ ಅವಧಿಯಲ್ಲಿ ಯಾವುದೇ ಪ್ರಭಾವ ಇಲ್ಲದೆ ಶಾಲೆಗೆ ರಾಜ್ಯ ಪ್ರಶಸ್ತಿ ದೊರೆಕಿಸಿಕೊಡಲು ಕಾರ್ಯನಿರ್ವಹಿಸಿದ್ದೇನೆ ಎಂದು ಇದೇ ವೇಳೆ ರಮಾನಾಥ ರೈ ನೆನಪಿಸಿದರು.
0 comments:
Post a Comment