ಮಂಗಳೂರು, ಅಕ್ಟೋಬರ್ 15, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡುಗೆ ಅನಿಲ ವಿತರಕರು ಮನೆ ಮನೆಗೆ ಅಡುಗೆ ಅನಿಲ ಸಿಲಿಂಡರ್‍ಗಳನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ನಿಗದಿಪಡಿಸಿದ ದರ ಹೊರತುಪಡಿಸಿ ಹೆಚ್ಚುವರಿ ದರಕ್ಕಾಗಿ ಒತ್ತಾಯಿಸಿದರೆ ದೂರು ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ದರ ವಸೂಲಿ ಮಾಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರುಗಳು ಬಂದಿದ್ದು, ದಿ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ರೆಗ್ಯೂಲೇಷನ್ ಆಫ್ ಸಪ್ಲೈ ಅಂಡ್ ಡಿಸ್ಟ್ರಿಬ್ಯೂಷನ್) ಆರ್ಡರ್ 2000ರನ್ವಯ ಸಂಬಂಧಪಟ್ಟ ಆಯಿಲ್ ಕಂಪೆನಿಗಳು ಡೋರ್ ಡೆಲಿವರಿ ಮೊಬಲಗನ್ನು ಆದೇಶದಲ್ಲಿ ನಿಗದಿಪಡಿಸಿದಂತೆ 5 ಕಿ.ಮೀ.ವರೆಗೆ ಉಚಿತವಾಗಿ ಹಾಗೂ 5 ಕಿ.ಮೀ ನಂತರದ ಪ್ರತಿ ಕಿ.ಮೀ.ಗೆ 1.60 ರೂಪಾಯಿ ಪ್ರತಿ ಸಿಲಿಂಡರ್‍ಗೆ ಪಡೆಯಬೇಕು ಎಂಬ ನಿಯಮ ಮಾತ್ರ ಜಾರಿಯಲ್ಲಿದೆ. ಇದನ್ನು ಮೀರಿ ಅನಿಲ ವಿತರಕರು ಹೆಚ್ಚುವರಿ ಹಣ ವಸೂಲಿಗಾಗಿ ಒತ್ತಾಯಿಸಿದರೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರು ಅಥವಾ ಟ್ರೋಲ್ ಫ್ರೀ ಸಂಖ್ಯೆ 1800-233-3555 ಗೆ ದೂರು ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪ ನಿರ್ದೇಶಕರು ತಿಳಿಸಿದ್ದಾರೆ.
0 comments:
Post a Comment