ಬಂಟ್ವಾಳ, ಅಕ್ಟೋಬರ್ 09, 2022 (ಕರಾವಳಿ ಟೈಮ್ಸ್) : ಮಿಲಾದ್ ಗಳಂತಹ ಸಂಭ್ರಮದ ಗಳಿಗೆಗಳು ಮನುಷ್ಯರ ನಡುವೆ ಇರುವ ದ್ವೇಷಾಸೂಯೆಗಳನ್ನು ಅಳಿಸಿ ಹಾಕಿ ಪರಸ್ಪರ ಪ್ರೀತಿ-ಸ್ನೇಹ, ಸುಮಧುರ ಬಾಂಧವ್ಯ ವೃದ್ದಿಸಲು ಪ್ರೇರಣೆಯಾಗಲಿ ಎಂದು ಸಜಿಪಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷ, ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ ಹಾರೈಸಿದ್ದಾರೆ.
ಪವಿತ್ರ ಉಮ್ರಾ ಸಲುವಾಗಿ ಮಕ್ಕಾ-ಮದೀನಾ ಸಂದರ್ಶನದಲ್ಲಿರುವ ಅವರು ಅಲ್ಲಿಂದಲೇ ಮಿಲಾದ್ ಸಂಭ್ರಮದ ಸಂದೇಶ ನೀಡಿದ ಅವರು, ಮನುಷ್ಯರ ನಡುವಿನ ಜಾತಿ, ಧರ್ಮ, ವರ್ಗ, ಪಂಗಡ, ಭಾಷೆ ಮೊದಲಾದ ಭೇಧಗಳನ್ನು ಮರೆತು ಮಾನವೀಯ ಮೌಲ್ಯಗಳನ್ನು ವೃದ್ದಿಸುವಂತಹ ಗುಣಗಳು ಮೇಳೈಸಿದಾಗ ಸಮಾಜದಲ್ಲಿ ಶಾಂತಿ-ಸೌಹಾರ್ದತೆ, ಮಾನವೀಯತೆ ಜೀವಂತವಾಗಿ ನಾಡಿನ ಸುಭಿಕ್ಷೆ ಸಾಧ್ಯವಾಗಲಿದೆ ಎಂದಿದ್ದಾರೆ.
ಸಮಾಜದ ಎಲ್ಲಾ ವರ್ಗದವರ ಹಬ್ಬ-ಹರಿದಿನಗಳಂತಹ ಸಂಭ್ರದ ಕ್ಷಣಗಳು ಪರಸ್ಪರ ಸೌಹಾರ್ದತೆಯನ್ನು ವೃದ್ದಿಸುವುದರ ಜೊತೆಗೆ ನಾಡಿನಾದ್ಯಂತ ಸಂಭ್ರಮಕ್ಕೆ ಕಾರಣವಾಗುವ ಮೂಲಕ ದೇಶದ ಸುಂದರ ಜಾತ್ಯಾತೀತ, ಗಣತಂತ್ರ ಹಾಗೂ ಸಾಮರಸ್ಯದ ತಿರುಳು ಶೋಭಿಸಲಿ ಎಂದು ಯೂಸುಫ್ ಕರಂದಾಡಿ ಸಂದೇಶ ಹೇಳಿಕೆಯಲ್ಲಿ ಹಾರೈಸಿದ್ದಾರೆ.
0 comments:
Post a Comment