ಬಂಟ್ವಾಳ, ಅಕ್ಟೋಬರ್ 09, 2022 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ತಲಪಾಡಿ ಬದ್ರಿಯಾ ಜುಮಾ ಮಸೀದಿ ತಲಪಾಡಿ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಜನ್ಮದಿನಾಚರಣೆಯ ಪ್ರಯುಕ್ತ ಹಲವು ಕಾರ್ಯಕ್ರಮಗಳು ನಡೆಯಿತು.
ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಇದಿನಬ್ಬ ಕರ್ನಾಟಕ ಧ್ವಜಾರೋಹಣಗೈದರು.
ಖತೀಬ್ ಹಂಝ ಫೈಝಿ ದುಆ ನೇರವೇರಿಸಿ, ಮೀಲಾದ್ ಸಂದೇಶ ನೀಡಿದರು. ಈ ಸಂದರ್ಭ ಮಸೀದಿ ಪದಾಧಿಕಾರಿಗಳಾದ ನಾಸಿರ್, ಕರೀಂ, ಅಶ್ರಫ್ ಬಿಎಂಟಿ, ಶಾಹುಲ್ ತಲಪಾಡಿ, ಲತೀಫ್ ಬಿಸಿ, ರಫೀಕ್ ಸಪ್ನಾ, ಅನ್ವರ್ ಬಿ, ಸದ್ದಾಂ, ಅಲ್ತಾಫ್, ಪ್ರಮುಖರಾದ ಅಬ್ದುಲ್ ರಝಾಕ್ ದಾರಿಮಿ, ನಿಝಾರ್ ಝುಹ್ರಿ, ರಝಾಕ್ ಮುಸ್ಲಿಯಾರ್, ಅಬೂಬಕರ್ ಹಾಜಿ, ಆದಂ, ಇದಿನಬ್ಬ ಮೊದಲಾದವರು ಭಾಗವಹಿಸಿದ್ದರು. ಅನ್ವರ್ ಕೆ ಎಚ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment