ಮಂಗಳೂರು, ಅಕ್ಟೋಬರ್ 21, 2022 (ಕರಾವಳಿ ಟೈಮ್ಸ್) : ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಫಾರ್ಮಸಿ, ಫಿಸಿಯೋಥೆರಪಿ, ನರ್ಸಿಂಗ್ ಮತ್ತು ಆರೋಗ್ಯ ವಿಜ್ಞಾನ ಸಂಬಂಧಿತ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಗುರುವಾರ (ಅ 19) ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಮಂಗಳೂರು ಎ ಜೆ ಮೆಡಿಕಲ್ ಕಾಲೇಜಿನ ಮಾನಸಿಕ ರೋಗ ವಿಭಾಗದ ಮುಖ್ಯಸ್ಧ ಮತ್ತು ನಗರದ ಮಾನಸ್ವಿ ಹಾಗೂ ವಿನಯ ಆಸ್ಪತ್ರೆಯ ನಿರ್ದೇಶಕ ಡಾ ರವೀಷ್ ತುಂಗ ಆರೋಡಿ ಕಾರ್ಯಕ್ರಮ ಉದ್ಟಾಟಿಸಿದರು. ರಾಜೀವ್ ಗಾಂಧೀ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಮತ್ತು ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ವಿತರಿಸಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ ಸದಾನಂದ ಶೆಟ್ಟಿ ಕ್ರೀಡೆ ಮತ್ತು ಸಾಂಸ್ಕøತಿಕ ಪ್ರತಿಭೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಬಹಳ ಮುಖ್ಯ ಎಂದರು.
ಶ್ರೀದೇವಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ ಜಗದೀಶ್ ವಿ ಕಾಮತ್, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ ವಿಜಯ್ ಪಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ ಬಿಬಿಯನಾ ವಿಜಯ್, ಆರೋಗ್ಯ ವಿಜ್ಞಾನ ಸಂಬಂಧಿತ ಕಾಲೇಜಿನ ಪ್ರಾಂಶುಪಾಲೆ ಸೀಮಾ 2021-22 ರ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಗಳನ್ನು ಪ್ರಸ್ತುತ ಪಡಿಸಿದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ನಿಧೀಶ್ ಎಸ್ ಶೆಟ್ಟಿ ಉಪಸ್ಧಿತರಿದ್ದರು. ಫಿಸಿಯೋಥೆರಪಿ ಉಪನ್ಯಾಸಕಿ ಡಾ ಅಶ್ವಿನಿ ರೈ ಸ್ವಾಗತಿಸಿ, ಫಾರ್ಮಸಿ ವಿಭಾಗದ ಉಪನ್ಯಾಸಕಿ ರೆಹಬ್ ತೋನ್ಸೆ ವಂದಿಸಿದರು. ಉಪನ್ಯಾಸಕಿಯರಾದ ಡಾ ದಿಶಾ ಹಾಗೂ ಸಂಗೀತಾ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment