ಉಳ್ಳಾಲ,
ಅಕ್ಟೋಬರ್ 08, 2022 (ಕರಾವಳಿ ಟೈಮ್ಸ್) : ಮುಸ್ತಫಾ ಮುಖ್ತಾರ್ ನಂದಾವರ ಮಾಲಕತ್ವದ
‘ಲೀಡ್ ಟ್ಯೂಟರ್ ಸೆಂಟರ್’ ಶೈಕ್ಷಣಿಕ ಸಂಸ್ಥೆಯು ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಐಫಾ
ಮೋಲ್ ಸಂಕೀರ್ಣದಲ್ಲಿ ಅಕ್ಟೋಬರ್ 10 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ
ಉದ್ಘಾಟನೆಗೊಳ್ಳಲಿದೆ.
ಬೋಳಂಗಡಿ
ಹವ್ವಾ ಜುಮಾ ಮಸೀದಿ ಖತೀಬ್ ಸಯ್ಯಿದ್ ಯಹ್ಯಾ ತಂಙಳ್ ಸಂಸ್ಥೆಯನ್ನು ಉದ್ಘಾಟಿಸಲಿದ್ದು,
ಮುಕ್ಕಚ್ಚೇರಿ ಜುಮಾ ಮಸೀದಿ ಖತೀಬ್ ಶರೀಫ್ ಬಾಖವಿ ಭಾಗವಹಿಸುವರು.
ಸಂಸ್ಥೆಯಲ್ಲಿ
1 ರಿಂದ 10ನೇ ತರಗತಿವರೆಗಿನ ಮಕ್ಕಳ ಸಹಿತ ಪಿಯುಸಿ ಹಾಗೂ ಪದವಿ ತರಗತಿ
ವಿದ್ಯಾರ್ಥಿಗಳಿಗೂ ವಿಶೇಷ ಬೋಧನಾ ತರಗತಿ ನಡೆಸಲಾಗುವುದು. ಜೊತೆಗೆ ವಿದ್ಯಾರ್ಥಿಗಳಿಗೆ
ಅಧ್ಯಯನ ಕೌಶಲ್ಯ, ಓದು ಹಾಗೂ ಬರವಣಿಗೆ ಕೌಶಲ್ಯ ಹಾಗೂ ಪ್ರತಿ ವಿದ್ಯಾರ್ಥಿಗೂ ವೈಯುಕ್ತಿಕ
ಗಮನ ನೀಡಲಾಗುವುದು. ಈ ಬಗ್ಗೆ ವಿವರಗಳಿಗೆ ಮೊಬೈಲ್ ಸಂಖ್ಯೆ 9845432779 ಅಥವಾ
9731567192 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಮುಸ್ತಫಾ ಮುಖ್ತಾರ್
ತಿಳಿಸಿದ್ದಾರೆ.
0 comments:
Post a Comment