ಬಂಟ್ವಾಳ, ಅಕ್ಟೋಬರ್ 23, 2022 (ಕರಾವಳಿ ಟೈಮ್ಸ್) : ಎಲೆಮರೆಯ ಕಾಯಿಯಂತೆ ಇರುವ ಕೆಲವೊಂದು ಪ್ರತಿಭೆಗಳು ಬೆಳಕಿಗೆ ಬರಲು ಸಂಘ-ಸಂಸ್ಥೆಗಳು ವೇದಿಕೆಗಳನ್ನು ಮಕ್ಕಳಿಗೆ ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ಕುಲಾಲ ಸಂಘಟನೆಯ ಚೈತನ್ಯ ಕಾರ್ಯಕ್ರಮ ಬಾಲ ಪ್ರತಿಭೆಗಳಿಗೆ ಉತ್ತಮ ಅವಕಾಶ ಒದಗಿಸಿಕೊಡಲು ಸದಾವಕಾಶ ಎಂದು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಚೆನ್ನಕೇಶವ ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧೀನದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಪೊಸಳ್ಳಿ ಕುಲಾಲ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ “ಚೈತನ್ಯ ಬದುಕಿಗೊಂದು ಬೆಳಕು” ನಿರಂತರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶಿವಾಲಯ ಮಾತನಾಡಿ, ನಾವು ಸಣ್ಣವರಿರುವಾಗ ಅವಕಾಶಗಳಿರಲಿಲ್ಲ, ನಮ್ಮ ಪ್ರತಿಭೆಗಳನ್ನು ಬೆಳಕಿಗೆ ತರಬೇಕಾದರೆ ತುಂಬಾ ಕಷ್ಟಪಡಬೇಕಾದ ಅನಿವಾರ್ಯತೆ ಇತ್ತು. ಆದರೆ ಇದೀಗ ಮಕ್ಕಳಿಗೆ ಪ್ರತಿಭೆಗಳನ್ನು ತೋರಲು ಹಲವು ಅವಕಾಶಗಳಿವೆ. ಚೈತನ್ಯ ಕಾರ್ಯಾಗಾರವೂ ಅಂತಹ ವೇದಿಕೆಗಳಲ್ಲೊಂದಾಗಿದೆ. ಇಂತಹ ಅವಕಾಶಗಳನ್ನು ಮಕ್ಕಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕಿದೆ ಎಂದರು.
ಸಂಘದ ಅಧ್ಯಕ್ಷ ನಾರಾಯಣ ಸಿ ಪೆರ್ನೆ ಅಧ್ಯಕ್ಷತೆ ವಹಿಸಿದ್ದರು. ಕುಲಾಲ ಸೇವಾದಳದ ಕಾರ್ಯದರ್ಶಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಸ್ವಾಗತಿಸಿ, ಸೇವಾದಳಪತಿ ಯಾದವ ಅಗ್ರಬೈಲು ಪ್ರಾಸ್ತಾವನೆಗೈದರು. ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ ಭಂಡಾರಿಬೆಟ್ಟು ವಂದಿಸಿದರು. ಗಣೇಶ್ ಕುಲಾಲ್ ದುಗನಕೋಡಿ ಮತ್ತು ದರ್ಶನ್ ಮೊಡಂಕಾಪು ಅತಿಥಿಗಳ ಪರಿಚಯ ಮಾಡಿದರು. ಸಾನ್ವಿ, ಲೇಖನ್, ಮಿಥ್ವಿ, ವೈಷ್ಣವಿ ಪ್ರಾರ್ಥನೆ ಪ್ರಸ್ತುತಪಡಿಸಿದರು. ನಿಶ್ಮಿತಾ ಕನಪಾದೆ ಮತ್ತು ಚಿರಾಗ್ ಮೈಯ್ಯರಬೈಲು ಕಾರ್ಯಕ್ರಮ ನಿರೂಪಿಸಿದರು.
ದೇವದಾಸ ಅಗ್ರಬೈಲು, ರಾಘವೇಂದ್ರ ಮೈರಾನ್‍ಪಾದೆ, ರಾಜೇಶ್ ರಾಯಿ, ನೂತನ್ ಸಹಕರಿಸಿದರು. ಇದೇ ವೇಳೆ ಮಾಜಿ ದಳಪತಿಗಳನ್ನು ಗುರುತಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಡ್ಯಾನ್ಸ್ ಕೊರೀಯೋಗ್ರಾಫರ್ ಮಹೇಶ್ ಕುಲಾಲ್ ಅವರು ಮಕ್ಕಳಿಗೆ ಡ್ಯಾನ್ಸ್ ತರಬೇತಿಗೆ ಚಾಲನೆ ನೀಡಿದರು.
0 comments:
Post a Comment