ಕಲ್ಲಡ್ಕ : ನಿರ್ಮಾಣ ಹಂತದ ಪಿಲ್ಲರ್ ಹಠಾತ್ ಕುಸಿತ, ಅಸುರಕ್ಷಿತ ಹಾಗೂ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಆತಂಕ ಹಾಗೂ ಭಯ ವ್ಯಕ್ತಪಡಿಸಿದ ಸ್ಥಳೀಯರು - Karavali Times ಕಲ್ಲಡ್ಕ : ನಿರ್ಮಾಣ ಹಂತದ ಪಿಲ್ಲರ್ ಹಠಾತ್ ಕುಸಿತ, ಅಸುರಕ್ಷಿತ ಹಾಗೂ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಆತಂಕ ಹಾಗೂ ಭಯ ವ್ಯಕ್ತಪಡಿಸಿದ ಸ್ಥಳೀಯರು - Karavali Times

728x90

13 October 2022

ಕಲ್ಲಡ್ಕ : ನಿರ್ಮಾಣ ಹಂತದ ಪಿಲ್ಲರ್ ಹಠಾತ್ ಕುಸಿತ, ಅಸುರಕ್ಷಿತ ಹಾಗೂ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಆತಂಕ ಹಾಗೂ ಭಯ ವ್ಯಕ್ತಪಡಿಸಿದ ಸ್ಥಳೀಯರು

ಬಂಟ್ವಾಳ, ಅಕ್ಟೋಬರ್ 13, 2022 (ಕರಾವಳಿ ಟೈಮ್ಸ್) : ಬಿ ಸಿ ರೋಡು-ಹಾಸನ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯ ನಿರ್ಮಾಣ ಹಂತದ ಪಿಲ್ಲರ್ ಗುರುವಾರ ಮಧ್ಯಾಹ್ನ ವೇಳೆ ಹಠಾತ್ ಕುಸಿತಗೊಂಡ ಘಟನೆ ನಡೆದಿದೆ. 

ಕಲ್ಲಡ್ಕ ಪೇಟೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮೊದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ತೀರಾ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿರುವ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆ ಇದೀಗ ಹಗಲು ಹೊತ್ತಿನಲ್ಲೇ ನಿರ್ಮಾಣ ಹಂತದ ಪಿಲ್ಲರ್ ಕಾಮಗಾರಿ ಕುಸಿತ ಕಂಡು ಬಂದಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ಭಯ ವ್ಯಕ್ತವಾಗಿದೆ. ಅಸುರಕ್ಷಿತ ಹಾಗೂ ಅವೈಜ್ಞಾನಿಕ ರೀತಿಯ ಕಾಮಗಾರಿ ನಡೆಯುತ್ತಿರುವುದೇ ಅವಾಂತರಕ್ಕೆ ಕಾರಣವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಲ್ಲರ್ ಕುಸಿತದ ವೇಳೆ ವಾಹನ ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಇಲ್ಲದೆ ಇರುವುದರಿಂದ ಸಂಭಾವ್ಯ ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. 

ನಿರ್ಮಾಣ ಹಂತದಲ್ಲೇ ಈ ರೀತಿ ಪಿಲ್ಲರ್ ಕುಸಿಯುತ್ತಿರುವ ಬೆಳವಣಿಗೆಯಿಂದ ಆತಂಕಗೊಂಡಿರುವ ಸಾರ್ವಜನಿಕರು ಕಾಮಗಾರಿ ಪೂರ್ಣಗೊಂಡ ಬಳಿಕ ಏನಾದರೂ ಭೀಕರ ಅನಾಹುತಗಳು ನಡೆದರೆ ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರಲ್ಲದೆ ಇಲ್ಲೂ ಕಾಮಗಾರಿಯಲ್ಲಿ ಏನಾದರೂ ಪರ್ಸೆಂಟೇಜ್ ಹಾವಳಿ ಇದೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ : ನಿರ್ಮಾಣ ಹಂತದ ಪಿಲ್ಲರ್ ಹಠಾತ್ ಕುಸಿತ, ಅಸುರಕ್ಷಿತ ಹಾಗೂ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಆತಂಕ ಹಾಗೂ ಭಯ ವ್ಯಕ್ತಪಡಿಸಿದ ಸ್ಥಳೀಯರು Rating: 5 Reviewed By: karavali Times
Scroll to Top