ಮಂಗಳೂರು, ಅಕ್ಟೋಬರ್ 15, 2022 (ಕರಾವಳಿ ಟೈಮ್ಸ್) : ಶಾಸಕ ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ಅವರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ದಾಖಲಿಸಿದ ದೂರಿಗೆ ಸಂಬಧಿಸಿದಂತೆ ಬೆದರಿಕೆ ಹಾಕಿದ ಸ್ಕಾರ್ಪಿಯೋ ಚಾಲಕನನ್ನು ವಾಹನ ಸಹಿತ ಅದೇ ದಿನ ಸಂಜೆ ವಶಕ್ಕೆ ಪಡೆದು ಓವರ್ ಟೇಕ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಮಾತಿನ ಚಕಮಕಿ ಎಂದು ತನಿಖೆಯಲ್ಲಿ ಕಂಡುಕೊಂಡಿದ್ದರೂ ಪೊಲೀಸರು ಮತ್ತೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಮುಂದುವರಿದ ತನಿಖೆಯಲ್ಲಿ ಪೊಲೀಸರು ಆರೋಪಿತನ ನಿವಾಸದಲ್ಲಿ ಶೋಧ ನಡೆಸಿದ್ದು, ಎರಡು ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಕಾರ್ಪಿಯೊ ವಾಹನದಲ್ಲಿದ್ದ ವಾಹನದಲ್ಲಿ ಬಳಸುವ ಒಂದು ಸ್ಪ್ಯಾನರ್ ರಾಡ್ ವಶಪಡಿಸಿಕೊಂಡಿದ್ದಾರೆ. ಇದೇ ಸ್ಪಾನರನ್ನು ನಿಂದಿಸುವಾಗ ಆರೋಪಿ ಬಳಸಿದ್ದು ಅದನ್ನೇ ಬೀಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment