ಬಂಟ್ವಾಳ, ಅಕ್ಟೋಬರ್ 14, 2022 (ಕರಾವಳಿ ಟೈಮ್ಸ್) : ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾದ ದಿವಂಗತ ಡಾ ಅಮ್ಮೆಂಬಳ ಬಾಳಪ್ಪ ಅವರ ಹೆಸರಿನಲ್ಲಿ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಹಿಳಾ ವಸತಿ ನಿಲಯ ನಿರ್ಮಾಣಕ್ಕೆ 1 ಸೆಂಟ್ಸ್ ಜಾಗ ಖರೀದಿ ಮೊತ್ತ, ತಾಲೂಕು ಕುಲಾಲ ಸುಧಾರಕ ಸಂಘದ ಮೇಲಂತಸ್ತಿನ ನೂತನ ಕಟ್ಟಡದ ಸಭಾಭವನದಲ್ಲಿ ವೇದಿಕೆ ನಿರ್ಮಾಣ ಮೊತ್ತ ಹಾಗೂ ಮುಡಿಪು ಕುಲಾಲ ಸಂಘದ ಸಭಾ ಭವನಕ್ಕೆ ಡಾ ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮುದಾಯ ಭವನ ಎಂದು ಹೆಸರಿಸಲು ನಿಧಿ ಸಮರ್ಪಣಾ ಕಾರ್ಯಕ್ರಮ ಬಂಟ್ವಾಳ ಬೈಪಾಸ್ ಬಳಿ ಇರುವ ಸಹಕಾರಿಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಕುಲಾಲ ಸಮುದಾಯದ ಹೆಮ್ಮೆಯಾಗಿರುವ ಅಮ್ಮೆಂಬಳ ಬಾಳಪ್ಪ ಅವರ ದೇಶ ಸೇವೆ ಕೇವಲ ಜಾತಿಗೆ ಸೀಮಿತವಾಗದೆ ಇಡೀ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ನಮ್ಮ ಕುಲಾಲ ಸಮುದಾಯದಲ್ಲಿ ಅವರು ಹುಟ್ಟಿರುವುದೇ ಹೆಮ್ಮೆಯ ವಿಚಾರ. ಅವರ ಮೇಲಿನ ಗೌರವದಿಂದ ಈ ಸಹಕಾರಿಯು ಸಮುದಾಯಕ್ಕೆ ನೆರವಾಗುತ್ತಿರುವುದು ನಮ್ಮ ಪಾಲಿನ ಅಭಿಮಾನ ಎಂದರಲ್ಲದೆ ಮಂಗಳೂರಿನಲ್ಲಿ ಒಂದು ರಸ್ತೆಗೆ ಅಮ್ಮೆಂಬಳ ಬಾಳಪ್ಪ ಅವರ ಹೆಸರಿಡಲು ಕಾನೂನು ರೀತಿಯ ಪ್ರಯತ್ನ ಪ್ರಗತಿಯಲ್ಲಿದ್ದು, ಶೀಘ್ರ ಅದು ಅನುಷ್ಠಾನಗೊಳ್ಳಲಿದೆ ಎಂದರು.
ಸಹಕಾರಿಯ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ ಪೆರ್ನೆ, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರಿಕಾಕ್ಷ, ಜಿಲ್ಲಾ ಮಾತೃ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ ಕುಲಾಲ್, ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ನವೀನ್ ಕುಲಾಲ್, ನರಿಕೊಂಬು ಕುಲಾಲ ಸಂಘದ ಮಾಜಿ ಅಧ್ಯಕ್ಷ ಮಾಧವ ಕುಲಾಲ್, ನಿರ್ದೇಶಕರಾದ ವಿಶ್ವನಾಥ ಕೆ ಬಿ, ಎಂ ವಾಮನ ಟೈಲರ್, ಜನಾರ್ದನ ಕುಲಾಲ್ ಬೊಂಡಾಲ, ವಿ ವಿಜಯ ಕುಮಾರ್, ಅರುಣ್ ಕುಮಾರ್ ಕೆ, ಸತೀಶ್, ಸುರೇಶ್ ಎನ್, ರಮೇಶ್ ಸಾಲ್ಯಾನ್, ನಾಗೇಶ್ ಬಿ, ಜಯಂತಿ, ವಿದ್ಯಾ, ವಿಜಯಲಕ್ಷ್ಮಿ ಜಗನ್ನಿವಾಸ ಗೌಡ, ಎಂ ಕೆ ಗಣೇಶ್ ಸಮಗಾರ, ಪದ್ಮನಾಭ ವಿಟ್ಲ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 comments:
Post a Comment