ಬಂಟ್ವಾಳ, ಅಕ್ಟೋಬರ್ 19, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯಲ್ಲಿ 2007ರ ಅವಧಿಯಲ್ಲಿ ನಡೆದ ಕೋಮು ಗಲಭೆ ಸಂದರ್ಭ ವ್ಯಕ್ತಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ದೀರ್ಘ ಅವಧಿಯಿಂದ ತಲೆಮರೆಸಿಕೊಂಡಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಜತ್ತೂರು ಗ್ರಾಮದ ತೂಮಿನಾಡು ನಿವಾಸಿ ಯಾಕೂಬ್ ಅವರ ಮಗ ಮಹಮ್ಮದ್ ಫಾರೂಕ್ ಅಲಿಯಾಸ್ ಫಾರೂಕ್ ಎಂಬಾತನನ್ನು ಬಂಟ್ವಾಳ ನಗರ ಠಾಣಾ ಪೆÇೀಲೀಸರು ಕೇರಳದ ಬಂದ್ಯೋಡುನಿಂದ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯದ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳ ನಗರ ಪೆÇೀಲಿಸ್ ಠಾಣಾ ವ್ಯಾಪ್ತಿಯ ಬಿ ಸಿ ರೋಡಿನಲ್ಲಿ 2007 ರಲ್ಲಿ ನಡೆದ ಕೋಮು ಗಲಭೆಯ ಸಂದರ್ಭ ವ್ಯಕ್ತಿಯೋರ್ವನ ಕೊಲೆಯತ್ನ ನಡೆಸಿದ ಆರೋಪದಲ್ಲಿ ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿತ್ತು. ಆದರೆ ಕಳೆದ 15 ವರ್ಷಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಈತ ತಲೆಮರೆಸಿಕೊಂಡಿದ್ದ.
0 comments:
Post a Comment