ಬಂಟ್ವಾಳ, ಸೆಪ್ಟೆಂಬರ್ 24, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಅಲಡ್ಕ ಎಸ್ಕೆಎಸ್ಸೆಸ್ಸೆಫ್ ಇದರ ಅಧೀನದಲ್ಲಿ ವಿದ್ಯಾರ್ಥಿ ಘಟಕ 'ಕ್ಯಾಂಪಸ್ ವಿಂಗ್" ರಚಿಸಲಾಗಿದ್ದು, ಸಮಿತಿಯ ಪ್ರಥಮ ಛೇರ್ಮೆನ್ ಆಗಿ ಮುಹಮ್ಮದ್ ರಿಳ್ವಾನ್ ಹಾಗೂ ಕನ್ವೀನರ್ ಆಗಿ ಶಹೀರ್ ಅವರನ್ನು ಆರಿಸಲಾಗಿದೆ.
ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಮಿತಿ ರಚನಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಉಪ ಛೇರ್ಮನ್ ಆಗಿ ಝಮೀರ್, ಸಂಘಟನಾ ಕಾರ್ಯದರ್ಶಿಯಾಗಿ ಶಾಹಿಫ್, ಉಪ ಕನ್ವೀನರ್ ಆಗಿ ಹುಸೈದ್, ಮಾಧ್ಯಮ ಪ್ರವರ್ತಕರಾಗಿ ಯಾಕೂಬ್ ಮುಶರ್ರಫ್ ಅವರನ್ನು ಆರಿಸಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಫ್ವಾನ್, ಸಫ್ವಾನ್, ಶಾಹಿದ್ ಅವರನ್ನು ನೇಮಕ ಮಾಡಲಾಗಿದೆ.
ಇದೇ ವೇಳೆ ನೌಷಾದ್ ಅನ್ಸಾರಿ ಬಾಂಬಿಲ ಅವರು ವಿದ್ಯಾರ್ಥಿಗಳಿಗೆ ನಾಯಕತ್ವ ಹಾಗೂ ವ್ಯಕ್ತಿತ್ವ ಶಿಬಿರ ನಡೆಸಿಕೊಟ್ಟರು.
ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ವಲಯ ಕ್ಯಾಂಪಸ್ ವಿಂಗ್ ಕಾರ್ಯದರ್ಶಿ ಹಾರಿಸ್ ನಂದಾವರ ಉದ್ಘಾಟಿಸಿದರು.
ಶಾಖಾ ಉಪಾಧ್ಯಕ್ಷ ಮಜೀದ್ ಬೋಳಂಗಡಿ, ಝುಬೈರ್ ಯು, ರಫೀಕ್ ಇನೋಳಿ, ಅಬ್ದುಲ್ ಖಾದರ್ ಪೈಂಟರ್ ಮೊದಲಾದವರು ಭಾಗವಹಿಸಿದ್ದರು.
ಬಶೀರ್ ಬೇಕರಿ ಸ್ವಾಗತಿಸಿ, ಮುಹಮ್ಮದ್ ಶಫೀಕ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment