ಪುತ್ತೂರು, ಸೆಪ್ಟೆಂಬರ್ 15, 2022 (ಕರಾವಳಿ ಟೈಮ್ಸ್) : ಅಂಗಡಿಗೆ ಸ್ವೀಟ್ ಖರೀದಿಗೆ ಬಂದಿದ್ದ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ಟೀಟ್ ಸ್ಟಾಲ್ ಅಂಗಡಿಯಲ್ಲಿ ಬುಧವಾರ (ಸೆ 14) ಸಂಜೆ ವೇಳೆ ಸ್ಥಳೀಯ ನಿವಾಸಿ ಮಹಿಳೆಯೊಬ್ಬರು ಸ್ವೀಟ್ ಖರೀದಿಸಿ ಅಂಗಡಿಯ ಮಾಲಿಕರಿಗೆ ಹಣ ನೀಡುತ್ತಿರುವಾಗ ಅಂಗಡಿಯೊಳಗೆ ಬಂದ ಆರೋಪಿ ಏಕಾಏಕಿ ಮಹಿಳೆಯ ಸೊಂಟದ ಹಿಂಬದಿಗೆ ಕೈ ಹಾಕಿ ನಿತಂಬವನ್ನು ಹಿಚುಕಿದ್ದು, ಆ ವೇಳೆ ಮಹಿಳೆ ಬೊಬ್ಬೆ ಹಾಕಿ ಆತನನ್ನು ದೂರ ತಳ್ಳಲು ಯತ್ನಿಸಿದಾಗ ಆತನು ಅಂಗಡಿಯಿಂದ ಹೊರಗೆ ಓಡಿ ಹೋಗಿರುತ್ತಾನೆ. ಬಳಿಕ ಆರೋಪಿಯ ಬಗ್ಗೆ ಮಹಿಳೆ ಅಂಗಡಿ ಮಾಲಿಕರಲ್ಲಿ ವಿಚಾರಿಸಿದಾಗ ಆರೋಪಿ ಯುವಕ ಪುತ್ತೂರು ತಾಲೂಕು ಸರ್ವೆ ಗ್ರಾಮದ ಸೊರಕೆ ಬಳಿಯ ಆದಂ ಎಂಬವರ ಮಗ ಬದ್ರುದ್ದೀನ್ ಎಂದು ತಿಳಿದಿರುತ್ತದೆ. ಈತನ ವಿರುದ್ದ ಮಹಿಳೆ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಅಪರಾಧ ಕ್ರಮಾಂಕ 91/2022 ಕಲo 354 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಆರೋಪಿ ಬದ್ರುದ್ದೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.
0 comments:
Post a Comment