ಬಂಟ್ವಾಳ, ಸೆಪ್ಟೆಂಬರ್ 07, 2022 (ಕರಾವಳಿ ಟೈಮ್ಸ್) : ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಬಂಟ್ವಾಳ-ವಿದ್ಯಾಗಿರಿಯ ಎಸ್ ವಿ ಎಸ್ ಶಾಲೆಯ 17 ವರ್ಷದೊಳಗಿನ ವಯೋಮಿತಿ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮಹಿಮಾ ಜೆ, ಹಾಗೂ 14 ವರ್ಷದೊಳಗಿನ ವಯೋಮಿತಿ ಬಾಲಕರ ವಿಭಾಗದಲ್ಲಿ 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ಎ ಬಿ ಮತ್ತು ಬಾಲಕಿಯರ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಅನನ್ಯ ಪಿ ಭಟ್ ಅವರುಗಳು ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಉಪಾಧ್ಯಕ್ಷೆ ವತ್ಸಲ ಕಾಮತ್, ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ, ಅನಿರುದ್ಧ ಕಾಮತ್, ಎಸ್ ವಿ ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ ರೇಖಾ ಶೆಣೈ ಹಾಗೂ ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment