ನವದೆಹಲಿ, ಸೆಪ್ಟೆಂಬರ್ 29, 2022 (ಕರಾವಳಿ ಟೈಮ್ಸ್) : ಕೊರೋನಾ ಲಾಕ್ ಡೌನ್ ಸಂದರ್ಭ ಬಿಪಿಎಲ್ ಪಡಿತರ ಚೀಟಿದಾರರಿಗೆ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಉಚಿತ ಪಡಿತರ ಯೋಜನೆ ಪ್ರಧಾನ ಮಂತ್ರಿ (ಪಿಎಂ) ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯೋಜನೆಯನ್ನು ಕೇಂದ್ರ ಸರ್ಕಾರ ಬುಧವಾರ ಮೂರು ತಿಂಗಳವರೆಗೆ ವಿಸ್ತರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆಯನ್ನು ಇನ್ನೂ 3 ತಿಂಗಳು ಅಂದರೆ ಡಿಸೆಂಬರ್ ತಿಂಗಳವರೆಗೆ ವಿಸ್ತರಿಸಲಾಗಿದೆ. 44,700 ಕೋಟಿ ವೆಚ್ಚದಲ್ಲಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ. ಸೆಪ್ಟೆಂಬರ್ 30 ರಂದು ಕೊನೆಗೊಳ್ಳಲಿದ್ದ ಈ ಯೋಜನೆ ಇದೀಗ ಡಿಸೆಂಬರ್ ಅಂತ್ಯದವರೆಗೆ ಮುಂದುವರಿಯಲಿದೆ. ಇದರಿಂದ ದೇಶದ 80 ಕೋಟಿ ಬಡವರು ಪ್ರಯೋಜನ ಪಡೆಯಲಿದ್ದಾರೆ. ಬಿಪಿಎಲ್ ಪಡಿತರ ಚೀಟಿದಾರರು ಪ್ರತಿ ತಿಂಗಳು 5 ಕೆಜಿ ಪಡಿತರವನ್ನು ಉಚಿತವಾಗಿ ಪಡೆಯುವ ಯೋಜನೆ ಇದಾಗಿದೆ.
ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರಕಾರವು 3.40 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲಿದೆ. ಖರ್ಚು ಮಾಡಿದೆ. ದೇಶದಲ್ಲಿ ಕೊರೋನಾ ಲಾಕ್ ಡೌನ್ ಹೇರಲ್ಪಟ್ಟ ಬಳಿಕ ಅಂದರೆ 2020 ರ ಎಪ್ರಿಲ್ ತಿಂಗಳಲ್ಲಿ ಕೇಂದ್ರ ಸರಕಾರವು ಈ ಯೋಜನೆ ಪ್ರಾರಂಭಿಸಿತು. ಬಳಿಕ ಮಾರ್ಚ್ 2022ರಲ್ಲಿ 6 ತಿಂಗಳವರೆಗೆ ಅಂದರೆ ಸೆಪ್ಟೆಂಬರ್ ತಿಂಗಳವರೆಗೆ ಇದನ್ನು ವಿಸ್ತರಿಸಲಾಯಿತು. ಇದೀಗ ಕೇಂದ್ರ ಸರಕಾರ ಮತ್ತೊಮ್ಮೆ 2022ರ ಡಿಸೆಂಬರ್‍ವರೆಗೆ 3 ತಿಂಗಳ ಕಾಲ ವಿಸ್ತರಿಸಿ ಆದೇಶಿಸಿದೆ.
0 comments:
Post a Comment