ಬೆಂಗಳೂರು, ಸೆಪ್ಟೆಂಬರ್ 28, 2022 (ಕರಾವಳಿ ಟೈಮ್ಸ್) : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೇರಸಾಲ ಯೋಜನೆ ಹಾಗೂ ಸಿಇಟಿ-ನೀಟ್ ಮೂಲಕ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಯೋಜನೆಯಡಿ ರಿನೀವಲ್ ಸಾಲ ಯೋಜನೆಗೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ನೇರ ಸಾಲ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ 18 ರಿಂದ 55 ವರ್ಷದೊಳಗಿನ ಕುಟುಂಬದ ವಾರ್ಷಿಕ ಆದಾಯ ರೂ 8 ಲಕ್ಷಗಳಿಗಿಂತ ಕಡಿಮೆ ಇರುವ ಅರ್ಜಿದಾರರಿಗೆ ರೂ 20 ಲಕ್ಷವರೆಗೆ ಶೇ 4 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ 8 ದಿಂದ 15 ಲಕ್ಷವರೆಗೆ ಇರುವ ಅರ್ಜಿದಾರರಿಗೆ ರೂ 20 ಲಕ್ಷವರೆಗೆ ಶೇ 6 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಫಲಾ£ Àುಭವಿಗಳಿಗೆ ಆಸ್ತಿಯ (ಕಟ್ಟಡ/ ಭೂಮಿ) ಅಡಮಾನದ ಮೇಲೆ ಮಾತ್ರ ಸಾಲವನ್ನು ಒದಗಿಸಲಾಗುವುದು. ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆಯಿರಬಾರದು. ವ್ಯಾಪಾರ ಉದ್ದಿಮೆ ಸಾಲವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ £ೀಡಲಾಗುವುದು.
ಬೇಕಾಗುವ ದಾಖಲಾತಿಗಳು: ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ (ನಿವಾಸದ ಪುರಾವೆ), ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಸ್ತಿಯ ಗುತ್ತಿಗೆ ಪತ್ರ/ ವಿಭಜನಾ ಪತ್ರ/ ಬಿಡುಗಡೆ ಪತ್ರ/ ಗಿಫ್ಟ್ ಡೀಡ್/ ಮಾರಾಟ ಪತ್ರ, ಸಿಎ (ಚಾರ್ಟರ್ಡ್ ಅಕೌಂಟೆಂಟ್) ವತಿಯಿಂದ ದೃಢೀಕರಿಸಿದ ಯೋಜನಾ ವರದಿ/ ಚಟುವಟಿಕೆಗಳ ವಿವರ, ಯೋಜನೆಗೆ ಸಂಬಂಧಿಸಿದ ದರಪಟ್ಟಿಗಳು, ಅಡಮಾನ ಮಾಡುವ ಸ್ವತ್ತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಂದ ಪಡೆದ ಪರವಾನಿಗೆ ಪತ್ರ, ಕಟ್ಟಡದ ಖಾತಾ ಎಕ್ಸಟ್ರಾಕ್ಟ್ ಮತ್ತು ಖಾತಾ ಪ್ರಮಾಣ ಪತ್ರ ಅಥವಾ ಭೂಮಿಯ ಹಕ್ಕು ಬದಲಾವಣೆ ಪ್ರತಿ, ಕಂದಾಯ ಜಮೀನಿನ ಪಹಣಿ ಮತ್ತು ಪೆÇೀಡಿ/ ವಿಭಜನಾ ಪತ್ರ, ಋಣಭಾರ ಪ್ರಮಾಣ ಪತ್ರ (ಇಸಿ) ಫಾರಂ ನಂ 15, ಸ್ಥಳೀಯ ಸಂಸ್ಥೆಗಳ ಇತ್ತೀಚಿನವರೆಗೆ ತೆರಿಗೆ ಪಾವತಿಸಿದ ರಶೀದಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಜಮೀನಿನ ಮಾರ್ಗದರ್ಶಿ ಬೆಲೆ, ಸ್ವತ್ತನ್ನು ಅಡಮಾನು ಮಾಡಲು ಕುಟುಂಬ ಸದಸ್ಯರ £ನಿÁಕ್ಷೇಪಣಾ ಪತ್ರ ವಂಶ ವೃಕ್ಷದೊಂದಿಗೆ, ಸ್ವಯಂ ಘೋಷಣೆ ಪತ್ರ, ಕಟ್ಟಡವಾಗಿದ್ದಲ್ಲಿ ನೋಂದಾಯಿತ ಮೌಲ್ಯ ಮಾಪಕರಿಂದ ಮೌಲ್ಯಮಾಪನ ವರದಿ/ ಮೌಲ್ಯ ಮಾಪನ ಪ್ರಮಾಣಪತ್ರ, ಜಿಲ್ಲಾ ವ್ಯವಸ್ಥಾಪಕರಿಂದ ಸ್ವತ್ತಿನ ಸ್ಥಳ ತನಿಖಾ ವರದಿ, ಬ್ಯಾಂಕ್ ಖಾತೆಯ ವಿವರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15, 2022 ಆಗಿರುತ್ತದೆ.
ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಿಇಟಿ-ನೀಟ್ ಮೂಲಕ ಪ್ರವೇಶ ಪಡೆದ ರಿನೀವಲ್ ವಿದ್ಯಾರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ನವೆಂಬರ್ 30, 2022 ಆಗಿರುತ್ತದೆ ಎಂದು ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment