ಮಂಗಳೂರು, ಸೆಪ್ಟೆಂಬರ್ 03, 2022 (ಕರಾವಳಿ ಟೈಮ್ಸ್) : ಸಮಸ್ತ ಕೇರಳ ಜಂ-ಇಯ್ಯತುಲ್ ಮುದರ್ರಿಸೀನ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ಸಮಾರಂಭ, ಸಮಿತಿ ಸದಸ್ಯರಿಗೆ ಕೇಂದ್ರ ಸಮಿತಿ ನೀಡುವ ಎಂ ಡಿ ಎಸ್ ಆರ್ ವಿತರಣೆ ಹಾಗೂ ಸಮಸ್ತ ಉಲಮಾ ಕನ್ವೆನ್ಷನ್ ಪ್ರಚಾರ ಸಮ್ಮೇಳ ಅಡ್ಯಾರ್-ಕಣ್ಣೂರು ಜುಮಾ ಮಸೀದಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಯ್ಯಿದ್ ಅಕ್ರಂ ಅಲಿ ತಂಙಳ್ ರಹ್ಮಾನಿ ಪ್ರಾರ್ಥನೆಗೈದರು. ಸ್ಥಳೀಯ ಖತೀಬ್ ಅನ್ಸಾರುದ್ದೀನ್ ಫೈಝಿ ಉದ್ಘಾಟಿಸಿದರು. ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನುಲ್ ಫೈಝಿ ತೋಡಾರು ಅಧ್ಯಕ್ಷತೆ ವಹಿಸಿದ್ದರು. ಉಸ್ಮಾನ್ ದಾರಿಮಿ ಕಿರಾಅತ್ ಪಠಿಸಿದರು. ಸಮಿತಿ ಕೋಶಾಧಿಕಾರಿ ಖಾಸಿಂ ದಾರಿಮಿ ಸಮಸ್ತ ಉಲಮಾ ಉಮರಾ ಕನ್ವೆನ್ಷನ್ ಬಗ್ಗೆ ವಿವರಿಸಿದರು.
ಇದೇ ವೇಳೆ ಸಮಸ್ತ ಕೇರಳ ಜಂ-ಇಯ್ಯತುಲ್ ಮುದರ್ರಿಸೀನ್ ಕೇಂದ್ರ ಸಮಿತಿ ಕೋಶಾಧಿಕಾರಿಯಾಗಿ ಆಯ್ಕೆಯಾದ ಉಸ್ಮಾನುಲ್ ಫೈಝಿ ತೋಡಾರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದ ಹೈದರ್ ದಾರಿಮಿ ಕರಾಯ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ರಫೀಕ್ ಹುದವಿ ಕೋಲಾರಿ ಮತ್ತು ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಖಾಸಿಂ ದಾರಿಮಿ ವಿಟ್ಲ ಮೊದಲಾದವರು ಸನ್ಮಾನಿಸಲಾಯಿತು. ಹೈದರ್ ದಾರಿಮಿ ಕರಾಯ ಸ್ವಾಗತಿಸಿ, ಶೈಖ್ ಮುಹಮ್ಮದ್ ಇರ್ಫಾನಿ ವಂದಿಸಿದರು.
0 comments:
Post a Comment