ಬಂಟ್ವಾಳ, ಸೆಪ್ಟೆಂಬರ್ 23, 2022 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮದ ನಂದಾವರ ಸಮೀಪದ ದಾಸರಗುಡ್ಡೆ ಬಜಾರ್ ಸಮೂಹ ಸಂಸ್ಥೆಗಳ ಪಾಲುದಾರ ಡಾ ಎಸ್ ಎಂ ಗೋಪಾಲಕೃಷ್ಣ ಆಚಾರ್ಯ (60) ಅವರು ಅಲ್ಪಕಾಲದ ಅನಾರೋಗ್ಯ ಕಾರಣದಿಂದ ಶುಕ್ರವಾರ ಮಧ್ಯಾಹ್ನ ವೇಳೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಂದಾವರ ದೇವಸ್ಥಾನ ಆಡಳಿತ ಸಮಿತಿಯ ಮಾಜಿ ಸದಸ್ಯರಾಗಿ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮುಂದಾಳುವಾಗಿದ್ದ ಇವರು ಕೊಡುಗೈ ದಾನಿಯಾಗಿ ಗುರುತಿಸಲ್ಪಟ್ಟಿದ್ದರು. ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಸಜಿಪಮುನ್ನೂರು ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಯೂಸುಫ್ ಕರಂದಾಡಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಗ್ರಾಮದ ಓರ್ವ ಯಶಸ್ವಿ ಉದ್ಯಮಿಯಾಗಿದ್ದ ಡಾ ಗೋಪಾಲಕೃಷ್ಣ ಆಚಾರ್ಯ ಅವರು ಗ್ರಾಮದ ಸರ್ವ ಜನಾಂಗದ ಜನರೊಂದಿಗೂ ಉತ್ತಮ ರೀತಿಯ ಬಾಂಧವ್ಯ ಹೊಂದಿ ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ಸರ್ವಧರ್ಮ ಸೌಹಾರ್ದತೆಯ ಕೊಂಡಿಯಾಗಿದ್ದಲ್ಲದೆ ಕೊಡುಗೈ ದಾನಿಯಾಗಿ ಸಮಾಜದ ಬಡ-ಬಗ್ಗರ ಬಗ್ಗೆ ಕರುಣೆ ತೋರುತ್ತಿದ್ದರು. ಇವರ ಅಗಲಿಕೆ ಸಜಿಪಮುನ್ನೂರು ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡುವುದರ ಜೊತೆಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬಿಕರಿಗೆ ಹಾಗೂ ಗ್ರಾಮಸ್ಥರಿಗೆ ಭಗವಂತ ದಯಪಾಲಿಸಲಿ ಎಂದು ಯೂಸುಫ್ ಕರಂದಾಡಿ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment