ಕಲರ್‍ ಫುಲ್ ಕಂಬಳಿ ಹುಳದಿಂದ ಮನುಷ್ಯನಿಗೆ ಅಪಾಯ ಎಂಬ ಸೋಶಿಯಲ್ ಮೀಡಿಯಾ ಪೋಸ್ಟ್ : ಕೀಟಗಳಿಂದ ಯಾವುದೇ ಅಪಾಯ ಇಲ್ಲ ಎಂದ ತಜ್ಞರು - Karavali Times ಕಲರ್‍ ಫುಲ್ ಕಂಬಳಿ ಹುಳದಿಂದ ಮನುಷ್ಯನಿಗೆ ಅಪಾಯ ಎಂಬ ಸೋಶಿಯಲ್ ಮೀಡಿಯಾ ಪೋಸ್ಟ್ : ಕೀಟಗಳಿಂದ ಯಾವುದೇ ಅಪಾಯ ಇಲ್ಲ ಎಂದ ತಜ್ಞರು - Karavali Times

728x90

20 September 2022

ಕಲರ್‍ ಫುಲ್ ಕಂಬಳಿ ಹುಳದಿಂದ ಮನುಷ್ಯನಿಗೆ ಅಪಾಯ ಎಂಬ ಸೋಶಿಯಲ್ ಮೀಡಿಯಾ ಪೋಸ್ಟ್ : ಕೀಟಗಳಿಂದ ಯಾವುದೇ ಅಪಾಯ ಇಲ್ಲ ಎಂದ ತಜ್ಞರು

ಬೆಂಗಳೂರು, ಸೆಪ್ಟೆಂಬರ್ 21, 2022 (ಕರಾವಳಿ ಟೈಮ್ಸ್) : ಕಲರ್ ಫುಲ್ ಕಂಬಳಿ ಹುಳ ಅಥವಾ ವರ್ಣ ರಂಜಿತ ಕಂಬಳಿ ಹುಳ ಅಥವಾ ಕ್ಯಾಟರ್ ಪಿಲ್ಲರ್ ಎಂಬ ಕೀಟದ ಬಗ್ಗೆ ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಅಪಾಯಕಾರಿಯಾಗಿ ಸಂದೇಶ ರವಾನೆಯಾಗುತ್ತಿದ್ದು, ಇದರಿಂದ ರೈತ ವರ್ಗ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದೆ. ಆದರೆ ಈ ಕಂಬಳಿ ಹುಳ ಕಾರಣದಿಂದ ಅಂತಹ ಅಪಾಯ ಯಾವುದೂ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. 

ಕಬ್ಬಿನ ಗದ್ದೆಯಲ್ಲಿ ಹೆಚ್ಚಾಗಿ ಕಂಡು ಬರುವ ಈ ಕೀಟದಿಂದ ಸಾವು ಸಂಭವಿಸಿದೆ ಎಂಬ ಒಕ್ಕಣೆಯೊಂದಿಗೆ ಕಲರ್ ಕಂಬಳಿ ಹುಳ ಹಾಗೂ ಮನುಷ್ಯನ ಮೃತದೇಹದ ಚಿತ್ರವಿರುವ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಕಲೆ ದಿನಗಳಿಂದ ವ್ಯಾಪಕವಾಗಿ ಹರಿದಾಡುತ್ತಿದೆ. ಕೆಲವರು ಈ ಸಂದೇಶದ ಪೂರ್ವಾಪರ ವಿಚಾರಿಸದೆ ಬೇಕಾಬಿಟ್ಟಿ ಫಾರ್ವರ್ಡ್ ಮಾಡುತ್ತಿರುವುದೂ ಕಂಡು ಬರುತ್ತಿದೆ. ಈ ಒಂದು ಬೆಳವಣಿಗೆ ರಾಜ್ಯದ ರೈತಾಪಿ ವರ್ಗದಲ್ಲಿ ಹಾಗೂ ಸಾರ್ವಜನಿಕರಲ್ಲಿ ಒಂದು ರೀತಿಯ ಭೀತಿಯ ವಾತಾವರಣ ಉಂಟು ಮಾಡಿದ್ದು, ಕಂಬಳಿ ಹುಳಗಳ ಬಗ್ಗೆ ಸುಖಾ ಸುಮ್ಮನೆ ವಿಲನ್ ತರ ನೋಡುವಂತೆ ಮಾಡಲಾಗುತ್ತಿದೆ. 

ಕೃಷಿ ತಜ್ಞರು ಹಾಗೂ ಕೀಟ ಶಾಸ್ತ್ರಜ್ಞರು ಕಲರ್ ಫುಲ್ ಕಂಬಳಿ ಹುಳಗಳ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಗಳ ಮೂಲಕ ಜನರ ಆತಂಕ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ. ತಜ್ಞರ ಪ್ರಕಾರ, ಚಿಟ್ಟೆ ಹುಳು ಅಥವಾ ಕಂಬಳಿ ಹುಳಗಳು ನಿರುಪದ್ರವಿ ಜೀವಿಗಳು. ಇದು ಮನುಷ್ಯರ ಅಥವಾ ಯಾವುದೇ ಜೀವಿಗಳ ಸಾವಿಗೆ ಕಾರಣವಾಗುವುದಿಲ್ಲ. ಅವುಗಳನ್ನು ಸ್ಪರ್ಶಿಸಿದರೆ ಚರ್ಮದ ಮೇಲೆ ಕಿರಿಕಿರಿ ಉಂಟಾಗುತ್ತದೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. 

ಕಂಬಳಿ ಹುಳುಗಳಿಂದ ಸಾವು ಸಂಭವಿಸುತ್ತದೆ ಎನ್ನುವ ಹೇಳಿಕೆಯನ್ನು ತಳ್ಳಿ ಹಾಕಿರುವ ಕೃಷಿ ತಜ್ಞರು, ರೈತರಲ್ಲಿ ಗೊಂದಲ ಸೃಷ್ಟಿಸಲು ಕಿಡಿಗೇಡಿಗಳು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ರೈತರು ಮತ್ತು ಅವರ ಸುರಕ್ಷತೆಗೆ ಸಂಬಂಧಿಸಿದ ಪೆÇೀಸ್ಟ್‍ಗಳು ಕೆಲವೇ ಸಮಯದಲ್ಲಿ ವೈರಲ್ ಆಗುತ್ತವೆ. ಈ ವಿಧದ ಕಂಬಳಿ ಹುಳುಗಳನ್ನು ಎಲ್ಲೆಡೆ ಕಂಡು ಹಿಡಿಯುವುದು ಸುಲಭವಲ್ಲ. ಇವುಗಳು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ಕೆಲವು ಭಾಗಗಳಲ್ಲಿ ಇವುಗಳು ಕಂಡುಬರುತ್ತವೆ. ಹಾಗಾಗಿ ಕಬ್ಬಿನ ಗದ್ದೆಗಳಲ್ಲಿ ಈ ಕೀಟಗಳು ಕಾಣಿಸುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

ಅನೇಕ ಕೀಟಗಳ ಬಗ್ಗೆ ಜನ ಸಾಮಾನ್ಯರಿಗೆ ಹೆಚ್ಚು ತಿಳಿದಿಲ್ಲ. ಹೀಗಾಗಿಯೇ ಈ ರೀತಿಯ ಪೆÇೀಸ್ಟ್‍ಗಳು ಕೌತುಕದ ರೀತಿಯಲ್ಲಿ ವೈರಲ್ ಆಗುತ್ತವೆ. ಕೆಲವು ವರ್ಷಗಳ ಹಿಂದೆ, ಐದು ತಲೆಯ ಹಾವುಗಳ ಫೆÇೀಟೋ ಶಾಪ್ ಮಾಡಿದ ಚಿತ್ರಗಳು ವೈರಲ್ ಆಗಿದ್ದವು. ಎರಡು ತಲೆಯ ಹಾವುಗಳ ಬಗ್ಗೆ ಪುರಾಣಗಳಿವೆ. ಇಂತಹ ಕಥೆಗಳನ್ನು ನಂಬಿ ಈ ಹಿಂದೆಯೂ ಪ್ರಾಣಿ ಹಿಂಸೆ ಮಾಡಿರುವ ಪ್ರಕರಣಗಳು ನಡೆದಿವೆ. ಪ್ರಾಣಿಗಳು ಅಥವಾ ಕೀಟಗಳ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುವ ಇಂತಹ ಬೆಳವಣಿಗೆಗಳ ಮೇಲೆ ಸೈಬರ್ ಕ್ರೈಮ್ ಪೆÇಲೀಸರು ನಿಗಾ ಇಡುವ ಮೂಲಕ ಪ್ರಾಣಿ, ಪಕ್ಷಿ ಅಥವಾ ಕೀಟಗಳ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ದ ಕಠಿಣ ಕ್ರಮ ಜರುಗಿಸುವ ಬಗ್ಗೆ ಚಿಂತಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಲರ್‍ ಫುಲ್ ಕಂಬಳಿ ಹುಳದಿಂದ ಮನುಷ್ಯನಿಗೆ ಅಪಾಯ ಎಂಬ ಸೋಶಿಯಲ್ ಮೀಡಿಯಾ ಪೋಸ್ಟ್ : ಕೀಟಗಳಿಂದ ಯಾವುದೇ ಅಪಾಯ ಇಲ್ಲ ಎಂದ ತಜ್ಞರು Rating: 5 Reviewed By: karavali Times
Scroll to Top