ಬಂಟ್ವಾಳ, ಸೆಪ್ಟೆಂಬರ್ 15, 2022 (ಕರಾವಳಿ ಟೈಮ್ಸ್) : ಯುವ ಕಾಂಗ್ರೆಸ್ ಬಂಟ್ವಾಳ ಬ್ಲಾಕ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಗಳ ಆಶ್ರಯದಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಅಶ್ವನಿ ಆಪ್ಟಿಕಲ್ಸ್ ಬಿ ಸಿ ರೋಡು ಇವರ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ ಸೆಪ್ಟೆಂಬರ್ 19 ರಂದು ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಬಂಟ್ವಾಳ-ಬೈಪಾಸ್ ರಸ್ತೆಯ ಕುಲಾಲ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 11.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ, ದ ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾವಳಕಟ್ಟೆ ಶ್ರೀ ಕೊಡಮಣಿತ್ತಾಯ ದೇವಸ್ಥಾನದ ತಂತ್ರಿ ಗಣೇಶ ಮುಚ್ಚಿನ್ನಾಯ, ಅಲ್ಲಿಪಾದೆ ಚರ್ಚ್ ಧರ್ಮಗುರು ಫೆಡ್ರಿಕ್ ಮೊಂತೆರೋ, ಇರ್ಶಾದ್ ಹುಸೈನ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರಿಂದ ಶುಭಾಶಿರ್ವಚನಗೈಯುವರು.
ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳಾದ ಜಕ್ರಿಬೆಟ್ಟಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿ, ಪಂಜಿಕಲ್ಲು ಆಟಿದ ಕೂಟ ಸಮಿತಿ, ಸಿದ್ದಕಟ್ಟೆ ಶ್ರೀ ಶಾರದೋತ್ಸವ ಆಚರಣಾ ಸಮಿತಿ, ದ ಕ ಜಿಲ್ಲಾ ಸಹಕಾರಿ ಸಂಘ ಸಮಿತಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್, ಬಂಟ್ವಾಳ ಬ್ಲಾಕ್ ಹಿಂದುಳಿದ ವರ್ಗ ಘಟಕ, ಬಂಟ್ವಾಳ ಬ್ಲಾಕ್ ಕಾರ್ಮಿಕ ಘಟಕ, ಬಂಟ್ವಾಳ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿ, ಬಂಟ್ವಾಳ ಬ್ಲಾಕ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮಿತಿ, ಬಂಟ್ವಾಳ ಬ್ಲಾಕ್ ಅಸಂಘಟಿತ ಕಾರ್ಮಿಕ ಘಟಕಗಳು ಸಂಪೂರ್ಣ ಸಹಕಾರ ನೀಡಲಿದೆ ಎಂದು ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರಾ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಮುಹಮ್ಮದ್ ಶರೀಫ್ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಂಚಾಲಕ ಪದ್ಮಶೇಖರ್ ಜೈನ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment