ಮಂಗಳೂರು, ಸೆಪ್ಟೆಂಬರ್ 15, 2022 (ಕರಾವಳಿ ಟೈಮ್ಸ್) : ಮಂಗಳೂರು ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜು ತಮ್ಮ ಪತ್ರಿಕೋದ್ಯಮ ವಿಭಾಗದಲ್ಲಿನ ಹೊಸ ಬಿ.ಎಸ್ಸಿ ವಿಶುವಲ್ ಕಮ್ಯುನಿಕೇಶನ್ ಕೋರ್ಸನ್ನು ಅಧಿಕೃತವಾಗಿ ಅಲೋಶಿಯಸ್ ವಿದ್ಯಾ ಸಂಸ್ಥೆಗಳ ರೆಕ್ಟರ್ ಮೆಲ್ವಿನ್ ಜೆ ಪಿಂಟೋ ಅವರು ಸಮಾಜಕ್ಕೆ ಅರ್ಪಿಸಿದರು.
ಕಾಲೇಜಿನ ಎಲ್ ಎಫ್ ರಸ್ಕಿನ್ಹಾ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಭೆಯಲ್ಲಿದ್ದ ವಿದ್ಯಾರ್ಥಿಗಳ ಭಾವಚಿತ್ರವನ್ನು ಪೆÇೀಲರಾಯ್ಡ್ ಕ್ಯಾಮರಾದಿಂದ ತೆಗೆಯಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ವಿಶುವಲ್ ಕಮ್ಯೂ£ನಿಕೇಶನ್ ನಲ್ಲಿ ಬಿ.ಎಸ್ಸಿ. ಪದವಿಯನ್ನು ಪರಿಚಯಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೀಲ್ ಟ್ರೈಬ್ ಡಿಜಿಟಲ್ ಸಂಸ್ಥೆಯ ಸ್ಥಾಪಕ ಹೃಶಿಕೇಶ್ ಅನಿಲ್ ಕುಮಾರ್ ಅವರು ವಿಶುವಲ್ ಕಮ್ಯೂನಿಕೇಶನ್ ವಿಭಾಗದ ಅಧಿಕೃತ ಯೂಟ್ಯೂಬ್ ವಾಹಿನಿ ಮತ್ತು ‘ಕ್ಯಾಂಪಸ್ ಬಝ್’ ಎಂಬ ವಿದ್ಯಾರ್ಥಿ ಬ್ಲಾಗ್ ಗೆ ಚಾಲನೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ತಯಾರಿಸಲಾದ ಮರಳು ಕಲೆಯ ಚಿತ್ರವನ್ನು ಗಣ್ಯರು ಅನಾವರಣಗೊಳಿಸಿದರು.
ಈ ಕೋರ್ಸಿನ ಉದ್ದೇಶ ಕಲೆ, ಸೃಜನ ಶೀಲತೆ ಮತ್ತು ತಂತ್ರಜ್ಞಾನದ ಸಂಗಮದೊಂದಿಗೆ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ದಾರಿ ದೀಪವಾಗುವುದಲ್ಲದೆ, ಆಧುನಿಕ ಮಾಧ್ಯಮ ಜಗತ್ತಿಗೆ ಸಮರ್ಥ ಅಭ್ಯರ್ಥಿಗಳನ್ನು ತಯಾರಿಸುವುದಾಗಿದೆ.
ಅಲೋಶಿಯಸ್ ವಿದ್ಯಾ ಸಂಸ್ಥೆಗಳ ರೆಕ್ಟರ್‍ಮೆಲ್ವಿನ್ ಜೆ ಪಿಂಟೋ ಎಸ್ ಜೆ, ಪ್ರಾಂಶುಪಾಲ ಡಾ ಪ್ರವೀಣ್ ಮಾರ್ಟಿಸ್ ಎಸ್ ಜೆ, ಕುಲಪತಿ ಡಾ ಆಲ್ವಿನ್ ಡಿಸಾ, ವಿಭಾಗ ಮುಖ್ಯಸ್ಥ ಡಾ ಶ್ವೇತಾ ಮಂಗಳತ್, ಕೋರ್ಸ್ ಸಂಯೋಜಕ ಅಬ್ದುಲ್ ರಶೀದ್, ಕ್ಸೇವಿಯರ್ ವಿಜ್ಞಾನ ಬ್ಲಾಕ್ ನಿರ್ದೇಶಕ ಡಾ ನಾರಾಯಣ ಭಟ್, ಎಐಎಂಐಟಿ ಬೀರಿಯ ನಿರ್ದೇಶಕ ಡಾ ಮೆಲ್ವಿನ್ ಪಿಂಟೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಳಿಕ ಮುಖ್ಯ ಅತಿಥಿಯೊಂದಿಗೆ ಸಂವಾದ ನಡೆಯಿತು. ಕಾಲೇಜು ಆವರಣದಲ್ಲಿ ಕೋರ್ಸ್ ಪರಿಚಯಿಸುವ ಸಲುವಾಗಿ ಫ್ಲಾಶ್ ಮಾಬ್ ನಡೆಯಿತು. ಕೋರ್ಸಿಗಾಗಿ ದಾಖಲಾತಿಗಳು ತೆರೆದಿವೆ. ಮೊದಲ ವರ್ಷದ ಪದವಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ಕಾಲೇಜು ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
0 comments:
Post a Comment