ಬಂಟ್ವಾಳ, ಸೆಪ್ಟೆಂಬರ್ 20, 2022 (ಕರಾವಳಿ ಟೈಮ್ಸ್) : ಪುದು ಗ್ರಾಮ ಪಂಚಾಯತಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನವನ್ನು ದುರುಪಯೋಗಪಡಿಸಿದ ಘಟನೆ ಖಂಡಿಸಿ ಬಿಜೆಪಿ ಮಂಗಳೂರು ಮಂಡಲ ಎಸ್ ಟಿ ಎಸ್ ಸಿ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮಂಗಳೂರು ಮಂಡಲ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ವಿನಯ ನೇತ್ರ, ಕಾರ್ಯದರ್ಶಿ ಅಣ್ಣಿ ಏಳ್ತಿಮಾರ್, ಕೋಶಾಧಿಕಾರಿ ಪ್ರಕಾಶ್ ಸಿಂಫೆÇನಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ ಕುಂಪಲ, ಜಯಶ್ರೀ ಕರ್ಕೇರ, ಮಂಗಳೂರು ಮಂಡಲ ಬಿಜೆಪಿ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮನೋಜ್ ಆಚಾರ್ಯ ನಾಣ್ಯ, ಮಂಡಲ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಶೆಟ್ಟಿ ಸುಜೀರು, ಸಾಮಾಜಿಕ ಜಾಲತಾಣ ಪ್ರಮುಖರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಪುದು ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ಸತೀಶ್ ನಾಯ್ಕ, ಮಹಾ ನಗರ ಪಾಲಿಕೆಯ ಕಾಪೆÇೀರೇಟರ್ ಮನೋಜ್ ಕುಮಾರ್, ಮಂಗಳೂರು ಮಂಡಲ ಎಸ್ ಸಿ ಮೋರ್ಚಾ ಅಧ್ಯಕ್ಷ ಸಂದೇಶ್, ಕಾರ್ಯದರ್ಶಿ ವರುಣ್ ರಾಜ, ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ಆನಂದ ಪಾಂಗಾಳ್, ಬಂಟ್ವಾಳ ಮಂಡಲ ಎಸ್ ಸಿ ಮೋರ್ಚಾ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು, ಜಿಲ್ಲಾ ಮುಂಡಾಲ ವೇದಿಕೆ ಅಧ್ಯಕ್ಷ ಜಯಚಂದ್ರ, ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸುಬ್ರಮಣ್ಯ ರಾವ್, ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಪುಂಚಮೆ, ಪಂಚಾಯತ್ ಸದಸ್ಯರುಗಳಾದ ಸಂತೋಷ್ ನೆತ್ತರಕೆರೆ, ಆಶಾ ನಯನ, ಜಯಂತಿ, ಸರೋಜಿನಿ, ಹಿರಿಯರಾದ ಭಾಸ್ಕರ ಚೌಟ ಕುಮುಡೇಲು, ಸೋಮಪ್ಪ ಕೋಟ್ಯಾನ್, ವೆಂಕಪ್ಪ ಗುರಿಕಾರ, ಗಿರಿಯಪ್ಪ ಕುಮ್ಡೇಲು, ಸೋಮನಾಥ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment