ಗುಜರಾತಿನಲ್ಲಿ ತುಳು ಸಿರಿ ಚಾವಡಿ ಪುರಸ್ಕಾರ ಪ್ರದಾನ, ತುಳು ಚಾವಡಿ ಕಾರ್ಯಕ್ರಮ - Karavali Times ಗುಜರಾತಿನಲ್ಲಿ ತುಳು ಸಿರಿ ಚಾವಡಿ ಪುರಸ್ಕಾರ ಪ್ರದಾನ, ತುಳು ಚಾವಡಿ ಕಾರ್ಯಕ್ರಮ - Karavali Times

728x90

30 August 2022

ಗುಜರಾತಿನಲ್ಲಿ ತುಳು ಸಿರಿ ಚಾವಡಿ ಪುರಸ್ಕಾರ ಪ್ರದಾನ, ತುಳು ಚಾವಡಿ ಕಾರ್ಯಕ್ರಮ

ಮಂಗಳೂರು, ಆಗಸ್ಟ್ 30, 2022 (ಕರಾವಳಿ ಟೈಮ್ಸ್) : ಹೊತ್ತ ಭೂಮಿ, ಹೆತ್ತ ತಾಯಿ ಹಾಗೂ ಸಂಸ್ಕಾರ ನೀಡಿದ ಗುರುಗಳಿಗೆ ಋಣಿಯಾಗಿ ಬಾಳುವವರು ತುಳುವರು. ತುಳುವ ನೆಲದ ದೈವ ದೇವರಿಗೆ ಸೇವೆ ನೀಡುವುದು ಮಾತ್ರವಲ್ಲದೆ ತುಳುನಾಡಿನ ಶೋಷಿತ ವರ್ಗದ ಜನತೆಯ ಶಿಕ್ಷಣಕ್ಕೆ ಶಕ್ತಿ ತುಂಬಿ ನಾಡಿನ ಜನರ ಬದುಕಿಗೆ ಆಸರೆ ನೀಡಿದವರೇ ಹೊರನಾಡ ತುಳುವರಾಗಿದ್ದಾರೆ. ತುಳುವರು ವಿಶ್ವವ್ಯಾಪಿಯಾಗಿ ನೆಲೆಯಾಗಿದ್ದಾರೆ. ತುಳುನಾಡ ಸಂಸ್ಕೃತಿ ಮೆರೆಸಲು ತುಳುವರ ಇಚ್ಚಾಶಕ್ತಿ ಗುರುತಿಸುವ ಹೊಣೆಗಾರಿಕೆ ನಮ್ಮದಾಗಿದೆ. ರಾಷ್ಟ್ರದ ಕೇಂದ್ರಾಡಳಿತ ಪ್ರದೇಶದಲ್ಲಿ ಕರ್ನಾಟಕ ಸರಕಾರದ ವಿಶೇಷ ಪುರಸ್ಕಾರವನ್ನು ತುಳು ಮಾತ್ರ ಭಾಷೆಯ ಮೂಲಕ ಗೌರವಿಸುವುದೇ ನಮ್ಮ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್ ಸಾರ್ ಹೇಳಿದರು. 

ಗುಜರಾತಿನ ವಾಪಿಯ ಕೋಲಿ ಸಮಾಜ ಸಭಾಗಣದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುನಾಡ ಐಸಿರಿ ವಾಪಿ ಗುಜರಾತ್ ಸಂಸ್ಥೆಗಳ ಆಶ್ರಯದಲ್ಲಿ ಆಗಸ್ಟ್ 27 ರಂದು ನಡೆದ ಸಿರಿಚಾವಡಿ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಂಚವರ್ಣದ ಮಣ್ಣಿನಲ್ಲಿ ನಮ್ಮೆಲ್ಲರನ್ನು ಸಾಕಿದ ತುಳುಮಾತೆ ಇಂದು ಜಾಗತಿಕವಾಗಿ ಮೆರೆದಿರುವುದು ತುಳುವರ  ಅಭಿಮಾನವಾಗಿದೆ ಎಂದರು.

ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಎಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ದಿನಪೂರ್ತಿ ಜರಗಿದ ‘ಸೋನೊಡ್ ಆಟಿದ ನೆಂಪು’ ತುಳು  ಚಾವಡಿ ಕಾರ್ಯಕ್ರಮವನ್ನು ಬರೋಡಾದ ತುಳು ಸಂಘದ ಅಧ್ಯಕ್ಷ ಶಶಿಧರ ಬಿ ಶೆಟ್ಟಿ ಗುರುವಾಯನಕರ ಹಿಂಗಾರ ಅರಳಿಸಿ ಉದ್ಘಾಟಿಸಿ, ತುಳುನಾಡ ಐಸಿರಿ ವೆಬ್ ಸೈಟ್ ಅನಾವರಣಗೊಳಿಸಿದರು.

ತುಳು ಸಾಹಿತ್ಯ ಅಕಾಡೆಮಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿನ ಸಿರಿಚಾವಡಿ ಪುರಸ್ಕಾರವನ್ನು ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ ಶೆಟ್ಟಿ ಗುರುವಾಯನಕರ ಅವರಿಗೆ, ಅಜಿತ್ ಎಸ್ ಶೆಟ್ಟಿ ಅಂಕ್ಲೇಶ್ವರ ಅವರಿಗೆ ‘ಸಿರಿಚಾವಡಿ ಯುವ ಸಾಧಕ ಪುರಸ್ಕಾರ’, ಹಿರಿಯ ಪತ್ರಕರ್ತ ಎಂ ಎಸ್ ರಾವ್ ಅಹ್ಮದಾಬಾದ್  ಅವರಿಗೆ ‘ಸಿರಿಚಾವಡಿ ಮಾಧ್ಯಮ ಪುರಸ್ಕಾರ’,  ತ್ರಿಶಾ ಶೆಟ್ಟಿ ಅವರಿಗೆ  ‘ಸಿರಿಚಾವಡಿ  ಬಾಲ ಸಾಧಕ ಪುರಸ್ಕಾರ’, ತುಳುನಾಡ ಐಸಿರಿ ಚಾರಿಟೆಬಲ್ ಟ್ರಸ್ಟ್ ಪರವಾಗಿ ಅಧ್ಯಕ್ಷ ಬಾಲಕೃಷ್ಣ ಎಸ್ ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ‘ಸಿರಿಚಾವಡಿ ಸಂಘಟನ ಪುರಸ್ಕಾರ’ವನ್ನು ದಯಾನಂದ  ಜಿ ಕತ್ತಲ್ ಸಾರ್ ಅವರು ಪ್ರದಾನ ಮಾಡಿ ಗೌರವಿಸಿ ಅಭಿನಂದಿಸಿದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸನ್ಮಾನಿಸಲಾಯಿತು. 

ಸಿರಿಚಾವಡಿ ಗೌರವ ಪುರಸ್ಕಾರ ಸ್ವೀಕರಿಸಿದ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಗುಜರಾತ್ ತುಳು ಬಾಂಧವರ ತುಳು ಭಾಷೆಯ ಪೆÇೀಷಣ ಶ್ರಮ ಅನನ್ಯವಾದುದು. ದೇಶದಲ್ಲೇ ಏಕೈಕ ತುಳು ಚಾವಡಿ ಇದ್ದರೆ ಅದು ಬರೋಡಾದಲ್ಲಿ. ಇದು ಇಲ್ಲಿನ ತುಳುವರ ಶ್ರಮವಾಗಿದ್ದು, ಇದು ತುಳು ಭಾಷಾ ಪ್ರೇಮದ ಶಕ್ತಿಯ ತಾಣವಾಗಿದೆ. ತುಳು ಅಕಾಡೆಮಿ ನನಗೆ ಪ್ರದಾನ ಮಾಡಿದ ಈ ಗೌರವ ಗುಜರಾತಿನ ಎಲ್ಲ ತುಳುವರಿಗೆ ಸಂದ ಗೌರವವಾಗಿದೆ ಎಂದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ್ ಪಾಲೆತ್ತಾಡಿ, ಗುಜರಾತ್ ಮಣ್ಣಿನಲ್ಲಿ ತುಳು, ಕನ್ನಡವನ್ನು ಬೆಳೆಸಿ ಪೆÇೀಷಿಸಿದ ಹಿರಿಮೆ ಇಲ್ಲಿನ ತುಳುವರದ್ದಾಗಿದೆ. ಬದಲಾವಣೆಗೆ ಹೊಂದಿಕೊಳ್ಳುವ ಕಾಲಘಟ್ಟದಲ್ಲೂ ನಮ್ಮ ಮಾತೃ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ಮತ್ತು ಐಸಿರಿಯ ಸೇವೆ ಪ್ರಶಂಸನೀಯ ಎಂದರು. ಅತಿಥಿಯಾಗಿದ್ದ ಬಿಲ್ಲವ ಸಂಘ ಗುಜರಾತ್ ಇದರ ಗೌರವಾಧ್ಯಕ್ಷ ದಯಾನಂದ ಆರ್, ಬೋಂಟ್ರಾ ಮಾತನಾಡಿ, ಗುಜರಾತ್, ಬರೋಡಾದಲ್ಲಿ ಸುಮಾರು 35 ವರ್ಷಗಳಿಂದ ತುಳು ಮಾತೃಸೇವೆ ನಡೆಯುತ್ತಿದೆ, ಹೊರನಾಡ  ಗುಜರಾತಿನಲ್ಲಿ ತುಳುವ ಸಂಘಟನೆ ಮೂಲಕ ಸಾವಿರಾರು ತುಳುವರು ಮಾತೃ ಭಾಷೆಯ ಮೂಲಕ ಒಂದಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ಅತಿಥಿಗಳಾಗಿ ಕರ್ನಾಟಕ ಸಂಘ ಸೂರತ್ ಉಪಾಧ್ಯಕ್ಷ ರಮೇಶ್ ಭಂಡಾರಿ, ತುಳು ಸಂಘ ಅಂಕಲೇಶ್ವರ ಅಧ್ಯಕ್ಷ ಶಂಕರ್ ಕೆ ಶೆಟ್ಟಿ, ಪಟ್ಟ ಫೌಂಡೇಶನ್ ಗುಜರಾತ್ ಘಟಕಾಧ್ಯಕ್ಷ ಅಜಿತ್ ಎಸ್ ಶೆಟ್ಟಿ, ತುಳು ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪು ಎಲ್ ಶೆಟ್ಟಿ, ಕರ್ನಾಟಕ ಸಮಾಜ ಸೂರತ್ ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ನರೇಂದ್ರ ಕಡೆಕಾರು, ಪಿ ಎಂ ರವಿ ಮಡಿಕೇರಿ ಮೊದಲಾದವರು ಭಾಗವಹಿಸಿದ್ದರು. 

ತುಳುನಾಡ ಐಸಿರಿ ವಾಷಿ ಗೌರವಾಧ್ಯಕ್ಷ ಸದಾಶಿವ ಜಿ ಪೂಜಾರಿ, ಉಪಾಧ್ಯಕ್ಷ ನವೀನ್ ಎಸ್ ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಪ್ರದೀಪ್ ಪೂಜಾರಿ, ಜತೆ ಕಾರ್ಯದರ್ಶಿ ಸುಕೇಶ್ ಎ ಶೆಟ್ಟಿ, ಜತೆ ಕೋಶಾಧಿಕಾರಿ ಗಣೇಶ್ ಶೆಟ್ಟಿ, ಸಂಚಾಲಕ ಪುಷ್ಪರಾಜ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಬಿ ಶೆಟ್ಟಿ, ಕಾರ್ಯದರ್ಶಿ ಅರುಂಧತಿ ಶೆಟ್ಟಿ, ಇತರ ಪದಾಧಿಕಾರಿಗಳು ಭಾಗವಹಿಸಿದ್ದರು. 

ಬಾಲಕೃಷ್ಣ ಎಸ್ ಶೆಟ್ಟಿ ಸ್ವಾಗತಿಸಿ, ತುಳು ಸಂಘ ಬರೋಡ ಗೌರವ ಕಾರ್ಯದರ್ಶಿ ಬಾಲಕೃಷ್ಣ ಎಸ್ ಶೆಟ್ಟಿ ಪ್ರಸ್ತಾವನೆಗೈದರು. ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಶೆಟ್ಟಿ ಪ್ರಾರ್ಥನೆಗೈದರು. ಪ್ರಫುಲ್ಲಾ ಶೆಟ್ಟಿ, ಶಾಲಿನಿ ಶೆಟ್ಟಿ, ಸೃಷ್ಟಿ ತಾ ಯು ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಚಿನ್ ಪೂಜಾರಿ, ಪಿ ಎಂ ರವಿ ಪಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಗತ ಸಾಲಿನಲ್ಲಿ ಅಗಲಿದ ಐಸಿರಿ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನವೀನ್ ಶೆಟ್ಟಿ ನುಡಿ ನಮನ ಸಲ್ಲಿಸಿದರು. ಕೇಶವ ಪೂಜಾರಿ, ಕಾಂತಿ ಎಸ್ ಶೆಟ್ಟಿ, ಸೃಷ್ಟಿತಾ ಯು ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನರೇಂದ್ರ ಕಡೆಕಾರು ತುಳು ಅಕಾಡೆಮಿ ಬಗ್ಗೆ ಮಾಹಿತಿ ನೀಡಿ, ಪುರಸ್ಕಾರ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಉದಯ ಬಿ ಶೆಟ್ಟಿ ವಂದಿಸಿದರು. ಚಂದ್ರಿಕಾ ಕೋಟ್ಯಾನ್ ಬಳಗದಿಂದ ಆಟಿ ಕಳಂಜೆ, ಕಂಗೀಲು ನೃತ್ಯ ನಡೆಯಿತು. ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.

  • Blogger Comments
  • Facebook Comments

0 comments:

Post a Comment

Item Reviewed: ಗುಜರಾತಿನಲ್ಲಿ ತುಳು ಸಿರಿ ಚಾವಡಿ ಪುರಸ್ಕಾರ ಪ್ರದಾನ, ತುಳು ಚಾವಡಿ ಕಾರ್ಯಕ್ರಮ Rating: 5 Reviewed By: karavali Times
Scroll to Top