ಬಂಟ್ವಾಳ, ಆಗಸ್ಟ್ 13, 2022 (ಕರಾವಳಿ ಟೈಮ್ಸ್) : ತಾಲೂಕಿನ ನಲ್ಕೆಮಾರ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ಗುರುವಾರ ನಡೆಯಿತು.
ಇದೇ ವೇಳೆ ಶಾಲಾಭಿವೃದ್ಧಿ ಸಮಿತಿ ವತಿಯಿಂದ ರಕ್ಷಾ ಬಂಧನ ವಿತರಿಸಲಾಯಿತು. ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ರಕ್ಷಾ ಬಂಧನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ಸಂಧರ್ಭ ಮುಖ್ಯ ಶಿಕ್ಷಕಿ ಜ್ಯೋತಿ, ಸಹ ಶಿಕ್ಷಕಿಯರಾದ ಮೋಹಿನಿ, ಜ್ಯೋತಿ, ಶಶಿಕಲಾ, ಸೌಮ್ಯ, ಮಮತಾ, ಅಕ್ಷತಾ, ಶಿಕ್ಷಕ ಜಗನ್ನಾಥ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment