ಬಂಟ್ವಾಳ, ಆಗಸ್ಟ್ 06, 2022 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ವಿವಿಧೆಡೆ ಮಳೆಹಾನಿ ಪ್ರಕರಣಗಳೂ ವರದಿಯಾಗಿದೆ.
ತಾಲೂಕಿನ ಪುದು ಗ್ರಾಮದ ಸುಜೀರು ನಿವಾಸಿಗಳಾದ ಹೇಮಾವತಿ ಅವರ ಮನೆಗೆ ಭಾಗಶಃ ಹಾನಿಯಾಗಿದ್ದು, ಇಕ್ಬಾಲ್ ಅವರ ಮನೆ ಬದಿ ಕಂಪೌಂಡ್ ಕುಸಿದು ಬಿದ್ದಿದೆ. ನಾವೂರು ಗ್ರಾಮದ ನಿವಾಸಿ ಜೋಸೆಫ್ ಅವರ ರಬ್ಬರ್ ಹಾಗೂ ತೆಂಗು ಕೃಷಿ ಭೂಮಿಯಲ್ಲಿ ಮಳೆ ನೀರು ನಿಂತು ಕೃಷಿ ಹಾನಿಯಾಗಿರುತ್ತದೆ. ಮೇರಮಜಲು ಗ್ರಾಮದ ನಿವಾಸಿ ಮಾಧವ ಅವರ ಮನೆಯ ಸ್ನಾನಗೃಹದ ಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಈ ಎಲ್ಲಾ ಮಳೆ ಹಾನಿ ಪ್ರಕರಣಗಳಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಅಂದಾಜು ನಡೆಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರಕಾರಕ್ಕೆ ವರದಿ ಒಪ್ಪಿಸಿದ್ದಾರೆ.
0 comments:
Post a Comment