ಬಂಟ್ವಾಳ, ಆಗಸ್ಟ್ 14, 2022 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಆಟಿದ ಕೂಟ ಸಮಿತಿ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಟಿಡ್ ಕೆಸರ್ಡ್ ಒಂಜಿ ದಿನ ವಿನೂತನ ಕಾರ್ಯಕ್ರಮ ಭಾನುವಾರ ಪಂಜಿಕಲ್ಲು ಗ್ರಾಮದ ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಯಶಸ್ವಿಯಾಗಿ ಹಾಗೂ ಅದ್ದೂರಿ ಹಾಗೂ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಮಾನಾಥ ರೈ, ಆಧುನಿಕ ಪಾಶ್ಚಾತ್ಯ ಸಂಸ್ಕøತಿಗಳಿಗೆ ಜನ ಮಾರು ಹೋಗುತ್ತಿರುವ ಪರಿಣಾಮವಾಗಿ ತುಳುನಾಡಿನ ಸಂಸ್ಕøತಿಗಳು ಮಾಯವಾಗುತ್ತಿದ್ದು, ಅವುಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾರೆ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೊಜಿಸುವುದು ಅತೀ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಾದ ಸಂಗೀತ ಕುರ್ಚಿ, ಕೆಸರು ಗದ್ದೆ ಓಟ, ಲಿಂಬೆ ಚಮಚ, ಪಾಡ್ದನ ಹೇಳುವ ಸ್ಪರ್ಧೆ, ಹಿಮ್ಮುಖ ಓಟ, £ೀರಿನ ಕೊಡ ಸೊಂಟದಲ್ಲಿಟ್ಟು ಓಟ, ಮಡಲ್ ಹೆಣೆಯುವುದು, ಮಡಕೆ ಒಡೆಯುವುದು, ಕಾರು ಕಂಬ್ಳ ಓಟ, ಹಗ್ಗ-ಜಗ್ಗಾಟ, ತ್ರೋಬಾಲ್, ಬಾಲ್ ಎಸೆತ, ಉರಾಳ್ ಹಾಕುವುದು, ಕಬಡ್ಡಿ, ವಾಲಿಬಾಲ್, ಅಡಿಕೆ ಹಾಳೆಯಲ್ಲಿ ಏಳೆತ, ದಂಪತಿಗೆ ಕ್ರೇಜಿ ಗೇಮ್, ತಪ್ಪಂಗಾಯಿ ಆಟ, ತೆಂಗಿನಕಾಯಿ ಉರುಳಿಸುವುದು ಸ್ಪರ್ಧೆಗಳು ನಡೆಯಿತು. ತುಳುನಾಡಿನ ಸಾಂಪ್ರದಾಯಿಕ ತಿಂಡಿ-ತಿನಿಸುಗಳು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಪ್ರಮುಖರಾದ ಪ್ರಕಾಶ್‍ಕುಮಾರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಸುದರ್ಶನ್ ಜೈನ್, ದೇವಪ್ಪ ಕುಲಾಲ್, ಬಾಲಕೃಷ್ಣ ಆಳ್ವ,, ಮಮತಾ ಗಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
0 comments:
Post a Comment