ಬಂಟ್ವಾಳ, ಆಗಸ್ಟ್ 21, 2022 (ಕರಾವಳಿ ಟೈಮ್ಸ್) : ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವೈಭವಪೂರ್ಣವಾಗಿ ಆಚರಿಸುವ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೀರ ಯೋಧರ ತ್ಯಾಗ-ಬಲಿದಾನವನ್ನು ನೆನಪಿಸುವ ಹಾಗೂ ದೇಶಕ್ಕೆ ಶಾಂತಿ ಸಾಮರಸ್ಯ ಸಾರುವ ನಿಟ್ಟಿನಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಆಗಸ್ಟ್ 23 ರಂದು ಮಂಗಳವಾರ (ನಾಳೆ) ಬಂಟ್ವಾಳದಲ್ಲಿ ಪಾದಾಯಾತ್ರೆ ನಡೆಯಲಿದೆ.
ನಾವೂರು ಗ್ರಾಮದ ಮಣಿಹಳ್ಳ ಜಂಕ್ಷನ್ನಿನಲ್ಲಿ ಬೆಳಿಗ್ಗೆ 9 ಗಂಟೆಗೆ ಅದ್ದೂರಿ ಪಾದಾಯಾತ್ರೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮೆಲ್ಕಾರ್ ಜಂಕ್ಷನ್ನಿಗೆ ಸಾಗಿ ಬರುವ ಪಾದಯಾತ್ರೆ ಮಧ್ಯಾಹ್ನ ಪಾಣೆಮಂಗಳೂರು-ಆಲಡ್ಕದಲ್ಲಿ ಊಟದ ವಿರಾಮ ಪಡೆದುಕೊಂಡು ಪಾಣೆಮಂಗಳೂರು ಪೇಟೆ ಮೂಲಕ ಗೂಡಿನಬಳಿ ಮಾರ್ಗವಾಗಿ ಬಿ ಸಿ ರೋಡು ಸರ್ವಿಸ್ ರಸ್ತೆ ಮೂಲಕ ಕೈಕಂಬದಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿರುವ ರಮಾನಾಥ ರೈ ತಿಳಿಸಿದ್ದಾರೆ.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಶೆಟ್ಟಿ, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಸುದರ್ಶನ ಜೈನ್, ಬಿ ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಆಲಿ, ಸದಾಶಿವ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ, ಅಬೂಬಕ್ಕರ್ ಸಿದ್ದೀಕ್, ವೆಂಕಪ್ಪ ಪೂಜಾರಿ, ಜನಾರ್ಧನ ಚೆಂಡ್ತಿಮಾರ್, ಮುಹಮ್ಮದ್ ಇಕ್ಬಾಲ್ ಜೆಟಿಟಿ ಮೊದಲಾದವರು ಪಾದಯಾತ್ರೆಯ ನೇತೃತ್ವ ವಹಿಸಲಿದ್ದಾರೆ.
0 comments:
Post a Comment