ಮಂಗಳೂರು, ಆಗಸ್ಟ್ 30, 2022 (ಕರಾವಳಿ ಟೈಮ್ಸ್) : ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಎ ಶಾಮರಾವ್ ಅವರ ಆಶೀರ್ವಾದದೊಂದಿಗೆ, ಎ ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ ಸಿ ಎ ಎ ರಾಘವೇಂದ್ರರಾವ್ ಮತ್ತು ಎ ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ, ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ ಎ ಶ್ರೀನಿವಾಸ್ ರಾವ್ ಅವರ ಮಾರ್ಗದರ್ಶನದಲ್ಲಿ ಶ್ರೀನಿವಾಸ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎ ಶಾಮ ರಾವ್ ನರ್ಸಿಂಗ್ ಸ್ಕೂಲ್, ವಳಚ್ಚಿಲ್ ಮಂಗಳೂರು ಇವರು 19ನೇ ಬಿಎಸ್ಸಿ (ಎನ್) ಮತ್ತು 17ನೇ ಜಿಎನ್‍ಎಂ ಬ್ಯಾಚ್‍ಗಾಗಿ ಆಗಸ್ಟ್ 26 ರಂದು ಪ್ರತಿಜ್ಞಾ ಸ್ವೀಕಾರ ಸಮಾರಂಭ ನಡೆಯಿತು.
ಮಂಗಳೂರು ಕೊಲಾಸೊ ಕಾಲೇಜ್ ಆಫ್ ನರ್ಸಿಂಗ್ ವೈದ್ಯಕೀಯ ಶಸ್ತ್ರಚಿಕಿತ್ಸಾ ನರ್ಸಿಂಗ್ ವಿಭಾಗದ ಎಚ್ ಒ ಡಿ ಪೆÇ್ರ ವಿಕ್ಟೋರಿಯಾ ಡಿ ಅಲ್ಮೇಡಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎ ಶಾಮರಾವ್ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯ ಪೆÇ್ರ ಇ ಆರ್ ಶ್ರೀಮತಿ ಎ ಮಿತ್ರ ಎಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಎ ಶಾಮರಾವ್ ಪ್ರತಿಷ್ಠಾನ ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿ ಸದಸ್ಯೆ ಶ್ರೀಮತಿ ಎ ವಿಜಯಲಕ್ಷ್ಮಿ ಆರ್ ರಾವ್ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ ನಿರ್ದೇಶಕಿ ಮೇಘನಾ ಎಸ್ ರಾವ್, ಶ್ರೀನಿವಾಸ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎ ಶಾಮ ರಾವ್ ನರ್ಸಿಂಗ್ ಸ್ಕೂಲ್, ವಳಚ್ಚಿಲ್ ಇದರ ಪ್ರಾಂಶುಪಾಲೆ ಡಾ ಫೆÇ್ಲೀರಿನ್ ಕ್ಲಾರಾ ಫೆರ್ನಾಂಡಿಸ್, ಶ್ರೀನಿವಾಸ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎ ಶಾಮ ರಾವ್ ನರ್ಸಿಂಗ್ ಸ್ಕೂಲ್, ವಳಚ್ಚಿಲ್ ಇದರ ಸಂಚಾಲಕ ಪೆÇ್ರ ಪ್ರದೀಪ ಎಂ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment