ಮಂಗಳೂರು, ಆಗಸ್ಟ್ 07, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಕೊಲೆಗಳ ಹಿನ್ನಲೆಯಲ್ಲಿ ಅಹಿತಕರ ಘಟನೆ ತಡೆಯುವ ನಿಟ್ಟಿನಲ್ಲಿ ಹೇರಲಾಗಿದ್ದ ರಾತ್ರಿ ನಿರ್ಬಂಧವನ್ನು ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ ರಾಜೇಂದ್ರ ಅವರು ಪರಿಷ್ಕøತ ಆದೇಶ ಹೊರಡಿಸಿದ್ದಾರೆ.
ಆರಂಭದಲ್ಲಿ ಸಂಜೆ 6 ಗಂಟೆಯಿಂದ ವ್ಯಾಪಾರ ವಹಿವಾಟು ನಿರ್ಬಂಧಿಸಿ ಡೀಸಿ ಆದೇಶ ಹೊರಡಿಸಿದ್ದರು. ಆ ಬಳಿಕ ಆಗಸ್ಟ್ 5 ರಂದು ಪರಿಷ್ಕøತ ಆದೇಶ ಹೊರಡಿಸಿದ್ದ ಡೀಸಿ ಅವರು ರಾತ್ರಿ 9 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದರು.
ಇದೀಗ ಆಗಸ್ಟ್ 8 ರಿಂದ ಈ ಎಲ್ಲಾ ರಾತ್ರಿ ನಿರ್ಬಂಧಗಳನ್ನು ತೆರವುಗೊಳಿಸಿರುವ ಜಿಲ್ಲಾಧಿಕಾರಿ ಜನ ಹಾಗೂ ವಾಹನಗಳು ಎಂದಿನಂತೆ ಓಡಾಟ ನಡೆಸಬಹುದು ಎಂದು ಆದೇಶಿಸಿದ್ದಾರೆ. ಆದರೆ ಆಗಸ್ಟ್ 14 ರವರೆಗೆ ಸೆಕ್ಷನ್ 144 ರಂತೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಡೀಸಿ ರಾಜೇಂದ್ರ ತಿಳಿಸಿದ್ದಾರೆ.
0 comments:
Post a Comment