ಮಂಗಳೂರು, ಆಗಸ್ಟ್ 02, 2022 (ಕರಾವಳಿ ಟೈಮ್ಸ್) : ದ.ಕ. ಜಿಲ್ಲೆಯಲ್ಲಿ ಉಂಟಾಗಿರುವ ಅಹಿತಕರ ಘಟನೆಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ವಿಧಿಸಿದ್ದ ರಾತ್ರಿ ನಿರ್ಬಂಧವನ್ನು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಕೋರಿಕೆಯ ಹಿನ್ನಲೆಯಲ್ಲಿ ಮತ್ತೆರಡು ದಿನ ಅಂದರೆ ಆಗಸ್ಟ್ 5ರ ಮುಂಜಾನೆವರೆಗೆ ವಿಸ್ತರಿಸಿ ಡೀಸಿ ಡಾ ರಾಜೇಂದ್ರ ಕುಮಾರ್ ಅವರು ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ಬಳಿಕ ಉಂಟಾಗಿರುವ ಆತಂಕದ ಪರಿಸ್ಥಿತಿ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ತುರ್ತು ಸೇವೆ ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ವಿಧಿಸಲಾಗಿದ್ದ ರಾತ್ರಿ ನಿರ್ಬಂಧವನ್ನು ಆಗಸ್ಟ್ 2ರ ಮಂಗಳವಾರ ಸಂಜೆ 6 ಗಂಟೆಯಿಂದ ಆಗಸ್ಟ್ 5ರ ಶುಕ್ರವಾರ ಮುಂಜಾನೆ 6 ಗಂಟೆವರೆಗೆ ವಿಸ್ತರಿಸಲಾಗಿದೆ.
ಜುಲೈ 29ರ ಸಂಜೆ 6 ಗಂಟೆಯಿಂದ ಆಗಸ್ಟ್ 1ರ ಮುಂಜಾನೆ 6ರವರೆಗೆ ಜಾರಿಯಲ್ಲಿದ್ದ ನಿರ್ಬಂಧವನ್ನು ಇದೀಗ ಮತ್ತೆರಡು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.
0 comments:
Post a Comment