ಬಂಟ್ವಾಳ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಸೋಮವಾರ ಬೆಳಿಗ್ಗೆ ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಧ್ವಜಾರೋಹಣಗೈದರು. ಅಬೂಸ್ವಾಲಿಹ್ ಫೈಝಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಸಮಿತಿ ಪದಾಧಿಕಾರಿಗಳಾದ ಬಶೀರ್ ಎನ್, ಅಬ್ದುಲ್ ಅಝೀಝ್ ಪಿ ಐ, ಮುಹಮ್ಮದ್ ಶಫಿಕ್, ಅಬ್ದುಲ್ ಮಜೀದ್ ಬೋಳಂಗಡಿ, ಹಾಜಿ ಅಬ್ದುಲ್ ಖಾದರ್, ಇಸಾಕ್ ಪೇಷನ್ ವೇರ್, ರಫೀಕ್ ಇನೋಳಿ, ಮುಹಮ್ಮದ್ ಹನೀಫ್ ಡ್ರೈಪಿಶ್, ಖಾದರ್ ಪೈಂಟರ್, ಶಾಫಿ ಹಾಜಿ, ಮುಹಮ್ಮದ್ ಬಂಗ್ಲೆಗುಡ್ಡೆ, ಇಬ್ರಾಹಿಂ ಹಾಗೂ ಸ್ಥಳೀಯರು ಭಾಗವಹಿಸಿದ್ದರು.
0 comments:
Post a Comment