ಬಂಟ್ವಾಳ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ದೇಶಾಭಿಮಾನವು ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲೇ ಬೆಳೆಯಬೇಕು. ಯುವ ಜನಾಂಗವು ಶಿಕ್ಷಣದೊದಿಗೆ ದೇಶದ ಅಭಿವೃದ್ದಿಯಲ್ಲಿ ತೊಡಗಿಕೊಂಡಾಗ ಸವ೯ ಜನಾಂಗದ ಶಾಂತಿಯ ತೋಟದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಶ್ರೀ ಮಾತಾ ಡೆವಲಪ್ಪರ್ಸ್ ಮಾಲಕ ಹಾಗೂ ಮಜಿ ಶಾಲಾ ದತ್ತು ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು.
ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಧ್ವಜಾರೋಹಣಗೈದರು. ಧ್ವಜಾರೋಹಣದ ಬಳಿಕ ಭಾರತಮಾತೆಯ ಜೊತೆಗೆ ರಾಷ್ಟ್ರನಾಯಕರ ವೇಷ ಭೂಷಣಗಳನ್ನು ತೊಟ್ಟ ವಿಧ್ಯಾರ್ಥಿಗಳಿಂದ ವೀರಕಂಬ ಗ್ರಾಮ ಪಂಚಾಯತ್ ವರೆಗೆ ಪ್ರಭಾತಭೇರಿ ನೆರವೇರಿತು.
ಕೆ.ಎಂ.ಎಫ್. ವಿಸ್ತರಣಾಧಿಕಾರಿ ಜಗದೀಶ್ ಮಜಿ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಮಜಿ ಶಾಲಾ ಶತಮಾನೋತ್ಸವ ಸಮಿತಿ ಪ್ರಧಾನ ಕಾಯ೯ದರ್ಶಿ ವಿಶ್ವನಾಥ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಜೀವ ಮೂಲ್ಯ, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ಸುಧಾಕರ ಮೈರಾ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಸುನಿಲ್ ಮೀನಾಕ್ಷಿ, ಅನಂತಾಡಿ ಬಂಟ್ರಿಂಜ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸುಂದರಿ ಟೀಚರ್, ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ, ಶಿಕ್ಷಕರಾದ ಮುಷೀ೯ದಾ, ಜಯಲಕ್ಷ್ಮೀ, ಅನುಷಾ, ಸಂಗೀತ ಶಮ೯, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಮಕ್ಕಳ ಪೋಷಕರು ಭಾಗವಹಿಸಿದ್ದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
0 comments:
Post a Comment