ಬಂಟ್ವಾಳ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಎಮಿನೆಂಟ್ ವಿದ್ಯಾ ಸಂಸ್ಥೆಯಲ್ಲಿ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸೋಮವಾರ ಆಚರಿಸಲಾಯಿತು.
ಉದ್ಯಮಿ ಅಲ್ಫೋನ್ಸ್ ಪಸನ್ನ ಧ್ವಜಾರೋಹಣಗೈದರು. ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಉದ್ಯಮಿಗಳಾದ ಪ್ರಮೋದ್, ವಲ್ಲಭ ಶೆಣೈ, ಶ್ರೀಮತಿ ಸರಳ ಜೈನ್, ಸಂಸ್ಥೆಯ ನಿರ್ದೇಶಕ ಇರ್ಶಾದ್, ಮಿಶ್ಕಾತುನ್ನೂರ್ ಮಹಿಳಾ ಶರೀಅತ್ ಕಾಲೇಜು ಪ್ರಾಂಶುಪಾಲ ರಾಝಿ ಬಾಖವಿ ಅಲ್-ಹೈತಮಿ, ಸಂಸ್ಥೆಯ ಶಿಕ್ಷಕರಾದ ಆಯಿಷಾ ಖಾದರ್, ನುಸೈಬಾ, ಆಯಿಷಾ ಸನಾ, ಆಯಿಷಾ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
0 comments:
Post a Comment