ಬಂಟ್ವಾಳ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ತಾಲೂಕಿನ ವಾಮದಪದವು ಲಯನ್ಸ್ ಕ್ಲಬ್ ಪ್ರಕೃತಿ ಇದರ ವತಿಯಿಂದ ಇಲ್ಲಿನ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸೋಮವಾರ ಆಚರಿಸಲಾಯಿತು.
ಕ್ಲಬ್ ಅಧ್ಯಕ್ಷ ಪ್ರಕಾಶ್ ಆಳ್ವ ಧ್ವಜರೋಹಣಗೈದು ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪ್ರಕೃತಿ ವಾಮದಪದವು ಇದರ ಕೋಶಾಧಿಕಾರಿ ಹಂಝ ಬಸ್ತಿಕೋಡಿ, ಕಾರ್ಯದರ್ಶಿ ಲಾರ್ದು ಮೆನೇಜಸ್ ಕರಿಮಲೆ, ಮಾರ್ಗದರ್ಶಕ ರಮೇಶ್ ಶೆಟ್ಟಿ ಬಜೆ, ಅಜ್ಜಿಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಚಂದ್ರ ಶೆಟ್ಟಿ, ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಸದಸ್ಯರಾದ ಯೋಗೇಶ್, ಪ್ರಕಾಶ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಗೋಪಾಲ್ ಶೆಟ್ಟಿ, ಪ್ರಭಾಕರ ಶೆಟ್ಟಿ ಹಾಗೂ ಇತರ ಎಲ್ಲಾ ಸದಸ್ಯರುಗಳು ಮತ್ತು ಹಾಸ್ಟೇಲ್ ನಿಯಮಪಾಲಕಿ ಸೀತಾ ಲಕ್ಷ್ಮೀ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment