ಬಂಟ್ವಾಳ, ಆಗಸ್ಟ್ 17, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 36/2021 ಕಲಂ 376, 506 ಐಪಿಸಿ ಮತ್ತು 4 ಹಾಗೂ 6 ಪೋಕ್ಸೋ (ಸ್ಪೆಷಲ್ ಕೇಸ್ 79/2021) ಪ್ರಕರಣದ ಆರೋಪಿ ವಿನ್ಸೆಂಟ್ ಪಿಂಟೋ ಅಲಿಯಾಸ್ ವಿನ್ಸೆಂಟ್ ರೋನಾಲ್ಡ ಪ್ರವೀಣ್ ಪಿಂಟೋ ಎಂಬಾತನ ಮೇಲಿನ ಆರೋಪ ನ್ಯಾಯಾಲಯದಲ್ಲಿ ರುಜುವಾತಾಗಿದ್ದು, ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಗೆ ಕಲಂ 8 ಪೋಕ್ಸೋ ಕಾಯ್ದೆಯಡಿ 3 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ಮತ್ತು ಕಲಂ 506 ಐಪಿಸಿ ಅಡಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಈತನ ಆರೋಪದ ಮೇಲೆ ತನಿಖಾಧಿಕಾರಿಯಾಗಿದ್ದ ಅಂದಿನ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಚೆಲುವಾರಾಜ ಪಿ ಐ ಅವರು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ-11 (ಪೋಕ್ಸೋ) ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
0 comments:
Post a Comment