ಸೌಹಾರ್ದತೆ, ಸಾಮರಸ್ಯದ ಬಂಟ್ವಾಳಕ್ಕಾಗಿ ಬಂಟ್ವಾಳ ಮಹೋತ್ಸವವಾಗಿ ಜಕ್ರಿಬೆಟ್ಟು ಗಣೇಶೋತ್ಸವ ಎಲ್ಲರನ್ನು ಸೇರಿಸಿ ನಡೆಯಲಿದೆ : ರಮಾನಾಥ ರೈ - Karavali Times ಸೌಹಾರ್ದತೆ, ಸಾಮರಸ್ಯದ ಬಂಟ್ವಾಳಕ್ಕಾಗಿ ಬಂಟ್ವಾಳ ಮಹೋತ್ಸವವಾಗಿ ಜಕ್ರಿಬೆಟ್ಟು ಗಣೇಶೋತ್ಸವ ಎಲ್ಲರನ್ನು ಸೇರಿಸಿ ನಡೆಯಲಿದೆ : ರಮಾನಾಥ ರೈ - Karavali Times

728x90

28 August 2022

ಸೌಹಾರ್ದತೆ, ಸಾಮರಸ್ಯದ ಬಂಟ್ವಾಳಕ್ಕಾಗಿ ಬಂಟ್ವಾಳ ಮಹೋತ್ಸವವಾಗಿ ಜಕ್ರಿಬೆಟ್ಟು ಗಣೇಶೋತ್ಸವ ಎಲ್ಲರನ್ನು ಸೇರಿಸಿ ನಡೆಯಲಿದೆ : ರಮಾನಾಥ ರೈ

ಬಂಟ್ವಾಳ, ಆಗಸ್ಟ್ 28, 2022 (ಕರಾವಳಿ ಟೈಮ್ಸ್) : ಜಾತಿ, ಧರ್ಮ, ಭಾಷೆ, ವರ್ಗಗಳನ್ನು ಮೀರಿ ಜನರನ್ನು ಪ್ರೀತಿಯಿಂದ ಆಹ್ವಾನಿಸಿ ಸಮಾಜದಲ್ಲಿ ಬಾಲಗಂಗಾಧರ ತಿಲಕ್ ಅವರ ಆಶಯದಂತೆ ಸಮಾಜದಲ್ಲಿ ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಉಂಟುಮಾಡುವ ನಾಡಿಗೆ ಮಾದರಿಯಾಗುವ ನಿಟ್ಟಿನಲ್ಲಿ ಜಕ್ರಿಬೆಟ್ಟು ಗಣೇಶೋತ್ಸವ ಅಥವಾ ಬಂಟ್ವಾಳ ಗಣೇಶೋತ್ಸವ ಸಾಗಿ ಬರುತ್ತಿದ್ದು, ಈ ಬಾರಿಯೂ ಅದ್ದೂರಿಯಾಗಿ ಈ ಗಣೇಶೋತ್ಸವ ಕಾರ್ಯಕ್ರಮ ಬಂಟ್ವಾಳದ ಹಬ್ಬದ ರೀತಿಯಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು. 

ಭಾನುವಾರ ಬಿ ಸಿ ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿಯ 19ನೇ ವರ್ಷದ ಬಂಟ್ವಾಳ ಗಣೇಶೋತ್ಸವ ಆಗಸ್ಟ್ 31 ರಿಂದ ಸೆಪ್ಟೆಂಬರ್ 4ರವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಬಂಟ್ವಾಳ ಗಣೇಶೋತ್ಸವಕ್ಕೆ  ವರ್ತಮಾನದಲ್ಲಿ ಇನ್ನಷ್ಟು ಮಹತ್ವ ನೀಡಲು ಪ್ರಯತ್ನಿಸುತ್ತೇವೆ. ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲಾಗಿದ್ದು, ಈ ಬಾರಿ ಮತ್ತೆ ವೈಭವ ಪಡೆದುಕೊಳ್ಳಲಿದೆ ಎಂದರು. 

ಬಂಟ್ವಾಳ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅನ್ನಪ್ರಸಾದ ಮುಖ್ಯವಾದ ಕಾರ್ಯಕ್ರಮವಾಗಿದ್ದು, ಬೆಳಿಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿವರೆಗೆ ಅನ್ನದಾನ ನಿರಂತರವಾಗಿ ನಡೆಯಲಿದ್ದು, ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ತಾಳಮದ್ದಲೆ ನಡೆಯಲಿದ್ದು, ಭಕ್ತರಿಂದ ಹೊರೆ ಕಾಣಿಕೆ ಹಾಗೂ ಜಿಲ್ಲೆಯ ಪ್ರಸಿದ್ದ ಭಜನಾ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮ ಈ ಬಾರಿಯ ವಿಶೇಷ ಕಾರ್ಯಕ್ರಮವಾಗಿದೆ ಎಂದರು.

ಈ ಸಂದರ್ಭ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೆ ಪದ್ಮನಾಭ ರೈ, ಜನಾರ್ದನ ಚೆಂಡ್ತಿಮಾರ್, ರಾಜೀವ್ ಶೆಟ್ಟಿ ಎಡ್ತೂರು, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಂಪತ್ ಕುಮಾರ್ ಶೆಟ್ಟಿ, ಲೋಲಾಕ್ಷ ಶೆಟ್ಟಿ, ಪ್ರವೀಣ್ ಬಿ ಜಕ್ರಿಬೆಟ್ಟು, ಸುರೇಶ್ ಜೋರಾ, ಜಯಂತಿ ಪೂಜಾರಿ, ಶಬೀರ್ ಸಿದ್ದಕಟ್ಟೆ, ವೆಂಕಪ್ಪ ಪೂಜಾರಿ, ಸುಧಾಕರ ಶೆಣೈ, ಮಹಾಬಲ ಬಂಗೇರ, ಮಲ್ಲಿಕಾ ಶೆಟ್ಟಿ, ಉಮೇಶ್ ಕುಲಾಲ್, ಚಂದ್ರಹಾಸ ಶೆಟ್ಟಿ, ರಾಜೀವ್ ಕಕ್ಕೆಪದವು, ಡೆಂಝಿಲ್ ನೊರೊನ್ಹಾ, ಪದ್ಮನಾಭ ಸಾಮಂತ್ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸೌಹಾರ್ದತೆ, ಸಾಮರಸ್ಯದ ಬಂಟ್ವಾಳಕ್ಕಾಗಿ ಬಂಟ್ವಾಳ ಮಹೋತ್ಸವವಾಗಿ ಜಕ್ರಿಬೆಟ್ಟು ಗಣೇಶೋತ್ಸವ ಎಲ್ಲರನ್ನು ಸೇರಿಸಿ ನಡೆಯಲಿದೆ : ರಮಾನಾಥ ರೈ Rating: 5 Reviewed By: karavali Times
Scroll to Top