ಭಾರತದ 15ನೇ ರಾಷ್ಟ್ರಪತಿಯಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಆಯ್ಕೆ : ಅಧಿಕೃತ ಘೋಷಣೆ - Karavali Times ಭಾರತದ 15ನೇ ರಾಷ್ಟ್ರಪತಿಯಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಆಯ್ಕೆ : ಅಧಿಕೃತ ಘೋಷಣೆ - Karavali Times

728x90

21 July 2022

ಭಾರತದ 15ನೇ ರಾಷ್ಟ್ರಪತಿಯಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಆಯ್ಕೆ : ಅಧಿಕೃತ ಘೋಷಣೆ

ನವದೆಹಲಿ, ಜುಲೈ 21, 2022 (ಕರಾವಳಿ ಟೈಮ್ಸ್) : ದೇಶದ ರಾಷ್ಟ್ರಪತಿ ಚುನಾವಣಾ ಫಲಿತಾಂಶ ಗುರುವಾರ ಸಂಜೆ ವೇಳೆಗೆ ಪ್ರಕಟಗೊಂಡಿದ್ದು ನಿರೀಕ್ಷೆಯಂತೆ ಎನ್‌ಡಿಎ ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಭರ್ಜರಿ ಗೆಲುವು ದಾಖಲಿಸಿ ದೇಶದ 15ನೇ ರಾಷ್ಷ್ರಪತಿಯಾಗಿ ಚುನಾಯಿತರಾಗಿದ್ದಾರೆ. 

ಗುರುವಾರ ಬೆಳಗ್ಗೆಯಿಂದ ನಡೆದ ಮತ ಎಣಿಕೆ ಪ್ರಕ್ರಿಯೆ ಸಂಜೆ ವೇಳೆಗೆ ಅಂತ್ಯಗೊಂಡಿದ್ದು, ದ್ರೌಪದಿ ಮುರ್ಮು 57,777 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಪ್ರತಿಸ್ಪರ್ಧಿ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ 26,1062 ಮತಗಳನ್ನು ಪಡೆದಿದ್ದಾರೆ.  ದ್ರೌಪದಿ ಮುರ್ಮು ಶೇಕಡಾ 68.87 ಮತಗಳನ್ನು ಪಡೆದರೆ, ಯಶವಂತ್ ಸಿನ್ಹ ಶೇಕಡಾ 31.1 ರಷ್ಟು ಮತಗಳನ್ನು  ಪಡೆದಿದ್ದಾರೆ.  ಈ‌ ಮೂಲಕ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೇರುತ್ತಿರುವ ಮೊದಲ ಆದಿವಾಸಿ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಅನ್ನೋ ಹಿರಿಮೆಗೂ ಪಾತ್ರರಾಗಿದ್ದಾರೆ. ಯುಪಿಎ ಅವಧಿಯಲ್ಲಿ ಪ್ರತಿಭಾ ಪಾಟೀಲ್ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದರು.

ದ್ರೌಪದಿ ಅವರು 2161 ಮತಗಳನ್ನು ಪಡೆದಿದ್ದು, ದ್ರೌಪದಿ ಮುರ್ಮು ಅವರ ಮತಗಳ ಮೌಲ್ಯ  5,77,777 ಆದರೆ, 1058 ಮತಗಳನ್ನು ಪಡೆದ ಯಶವಂತ್ ಸಿನ್ಹಾ ಅವರ ಮತಗಳ ಮೌಲ್ಯ 2,61,062 ಆಗಿದೆ.

ಭರ್ಜರಿ ಗೆಲುವು ದಾಖಲಿಸಿದ ದ್ರೌಪದಿ ಮುರ್ಮುಗೆ ವಿಪಕ್ಷಗಳ ಅಭ್ಯರ್ಥಿ, ಪ್ರತಿಸ್ಪರ್ಧಿ ಯಶವಂತ್ ಸಿನ್ಹ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಪರೋಕ್ಷವಾಗಿ ಬಿಜೆಪಿಯ ಕೈಗೊಂಬೆಯಾಗಬಾರದು ಎಂಬ ಕಿವಿ ಮಾತನ್ನು ಹೇಳಿದ್ದಾರೆ. ಚುನಾವಣೆಯಲ್ಲಿ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಸಲಿದ್ದಾರೆ. ಯಾವುದೇ ಭಯ, ಪಕ್ಷಪಾತಕ್ಕೆ ಒಳಗಾಗದೆ ಅಧಿಕಾರ ನಡೆಸಲಿ ಎಂದು ಯಶವಂತ್ ಸಿನ್ಹ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

ದ್ರೌಪದಿ ಮುರ್ಮು ಗೆಲುವಿನ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಮುರ್ಮು ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ.  


ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಸಮಾಜದ ಕೆಳಸ್ತರದಿಂದ ಬಂದು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸುತ್ತಿರುವುದು ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತ ಎಂದು ಬೊಮ್ಮಾಯಿ ಹೇಳಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಭಾರತದ 15ನೇ ರಾಷ್ಟ್ರಪತಿಯಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಆಯ್ಕೆ : ಅಧಿಕೃತ ಘೋಷಣೆ Rating: 5 Reviewed By: karavali Times
Scroll to Top