ಬಂಟ್ವಾಳ, ಜುಲೈ 16, 2022 (ಕರಾವಳಿ ಟೈಮ್ಸ್) : ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು ಇಲ್ಲಿನ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಆಗಸ್ಟ್ 7 ರಂದು ಭಾನುವಾರ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಂಘದ ಅಧ್ಯಕ್ಷ, ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಯಾಸ್ ಅಲಿ ಅವರು, ಪ್ರತಿಯೊಂದು ಸರಕಾರಿ ಶಾಲೆಗಳ ಭೌತಿಕ ಸವಲತ್ತುಗಳ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಕೊಡುಗೆ ಮಹತ್ವವಾಗಿದೆ. ತಾನು ಕಲಿತ ಶಾಲೆ ಎಂಬ ಅಭಿಮಾನದಿಂದ ತನ್ನ ನಿಸ್ವಾರ್ಥ ಸೇವೆ ಸಲ್ಲಿಸಿದರೆ ಶಾಲೆಯು ಅಭಿವೃದ್ಧಿಯಾಗಲು ಸಾಧ್ಯ. ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಪ್ರತಿಯೊಂದು ಶಾಲೆಗಳು ಖಾಸಗಿ ಶಾಲೆಗೆ ಸಾಟಿಯಾಗಿ ಪ್ರಗತಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರವೀಣ್ ಕೊಟ್ಟಾರಿ, ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ದಿವಾಕರ ಕುಂಟೂರು, ಗಣೇಶ್ ಪ್ರಭು, ಉಮ್ಮರ್ ಕುಂಞ ಸಾಲೆತ್ತೂರು, ಶಾಲಾ ಶಿಕ್ಷಕರಾದ ಶಿವಕುಮಾರ್ ಎಂ.ಜಿ, ಜಗನ್ನಾಥ ಪಿ., ವಿದ್ಯಾರ್ಥಿ ಸಂಘದ ಪ್ರಥಮ್ ಕಾರಂತ್, ಪೃಥ್ವಿಕ್ ರೈ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾರಾನಾಥ್ ಕೈರಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಮಿತ್ರಾ ವಂದಿಸಿದರು.
ಆಗಸ್ಟ್ 7 ರಂದು ನಡೆಯುವ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಉಪನ್ಯಾಸಕರೂ ಆದ ನರೇಂದ್ರ ರೈ ದೇರ್ಲ ಭಾಗವಹಿಸಲಿದ್ದು, ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಸೇವೆ ಸಲ್ಲಿಸಿದ ಹಿರಿಯ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
0 comments:
Post a Comment