ಬಂಟ್ವಾಳ, ಜುಲೈ 16, 2022 (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆ ಸಮೀಪದ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಶನಿವಾರ ಸರಕಾರಿ ಅಧಿಕಾರಿಗಳು ತೆರಳುತ್ತಿದ್ದ ಕಾರಿಗೆ ಸ್ಕೂಟರ್ ಅಡ್ಡ ಇಟ್ಟು ಅವ್ಯಾಚ್ಯವಾಗಿ ನಿಂದಿಸಿ, ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಕೂಟರ್ ಸವಾರ ಸಜಿಪನಡು ಗ್ರಾಮದ ಕೋಣಿಮಾರ್ ನಿವಾಸಿ ಎಸ್ ಕೆ ಇಕ್ಬಾಲ್ ಅವರ ಪುತ್ರ ಮಹಮ್ಮದ್ ಸಂಶುದ್ದೀನ್ (22) ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಬೆಳಿಗ್ಗೆ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದ್ದ ಎಡಿ ಎಚ್ ಒ ಸಿ ಸಭೆಗೆ ಲೆಕ್ಕಾಧಿಕಾರಿಗಳಾದ ಶ್ರೀಮತಿ ವಿದ್ಯಾ, ನಿತ್ಯಾನಂದ ಚಿಂಬಾಳ್ಕರ್ ಹಾಗೂ ಶ್ರೀಮತಿ ಶುಭಾ ಕುಮಾರಿ ಅವರು ಮಂಗಳೂರಿನಿಂದ ಪುತ್ತೂರು ಕಡೆಗೆ ಸರಕಾರಿ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಬೆಳಿಗ್ಗೆ ಸುಮಾರು 10.10 ಗಂಟೆ ಸಮಯಕ್ಕೆ ತುಂಬೆ ಸಮೀಪದ ತಿರುವು ರಸ್ತೆಯಲ್ಲಿ ಚಾಲಕರು ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಅದರ ಸವಾರರು ಒಮ್ಮಲೇ ರಸ್ತೆ ಗುಂಡಿಯನ್ನು ತಪ್ಪಿಸಲು ನಿಧಾನ ಮಾಡಿದಾಗ ಸರಕಾರಿ ಅಧಿಕಾರಿಗಳ ಕಾರಿನ ಚಾಲಕ ಕೂಡ ಕಾರನ್ನು ನಿಧಾನಗೊಳಿಸಿದ್ದು, ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ಸವಾರ ವೇಗ ನಿಯಂತ್ರಿಸಲಾಗದೆ ರಸ್ತೆಗೆ ಸ್ಕಿಡ್ ಆಗಿ ಬಿದ್ದಿದ್ದಾನೆ. ಈ ಸಂದರ್ಭ ಕಾರಿನ ಚಾಲಕರು ನಿಲ್ಲಿಸುವಷ್ಟರಲ್ಲಿ ಆರೋಪಿ ಸ್ಕೂಟರ್ ಚಾಲಕ ಅಲ್ಲಿಂದ ಎದ್ದು ಅದೇ ಸ್ಕೂಟರಿನಲ್ಲಿ ಬಂದು ಕಾರಿಗೆ ಅಡ್ಡ ನಿಲ್ಲಿಸಿ ಕಾರಿನ ಚಾಲಕನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕಾರಿನ ಬಲಗಡೆಯ ಸೈಡ್ ಮಿರರನ್ನು ಮುರಿದು ಹಾಕಿ ಬೊನಟ್ಟಿಗೆ ಕೈಯಿಂದ ಹೊಡೆದು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಸರಕಾರಿ ಕಾರು ಚಾಲಕ ದೇವದಾಸ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 52/2022 ಕಲಂ 341, 353, 504, 506, 427 ಐಪಿಸಿ ಮತ್ತು 2(ಎ) ಕೆಪಿಡಿಎಲ್‍ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿ ಸ್ಕೂಟರ್ ಸವಾರ ಮಹಮ್ಮದ್ ಸಂಶುದ್ದೀನ್ ಎಂಬಾತನನ್ನು ದಸ್ತಗಿರಿ ಮಾಡಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
0 comments:
Post a Comment