ಬಂಟ್ವಾಳ, ಜುಲೈ 11, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ನಿವಾಸಿ, ಮಂಗಳೂರು ವೆನ್ ಲಾಕ್ ಸರಕಾರಿ ಆಸ್ಪತ್ರೆಯ ಗುತ್ತಿಗೆ ವೈದ್ಯ ಡಾ ಅನೂಷ್ ನಾಯಕ್ (35) ಎಂಬಾತನನ್ನು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಗೆ ಕಳೆದ ಮಾರ್ಚ್ 6 ರಂದು ಮಾಣಿ ಗ್ರಾಮದ ಮಾಣಿ ಸರಕಾರಿ ಆಸ್ಪತ್ರೆಯ ಬಳಿಯಲ್ಲಿ ಆರೋಪಿ ಡಾ ಅನುಷ ನಾಯ್ಕ ಕಾಣ ಸಿಕ್ಕಿದ್ದು, ಈ ಸಂದರ್ಭ ಪ್ರೀತಿ ಮಾಡುವಂತೆ ತಿಳಿಸಿದಂತೆ ಒಪ್ಪಿಕೊಂಡಿದ್ದು, ಅದರಂತೆ ಸ್ವಲ್ಪ ಸಮಯದ ನಂತರ, ಆರೋಪಿಯು ಆತನ ಕಾರಿನಲ್ಲಿ ಬಾಲಕಿಯನ್ನು ಮಾಣಿ ಗ್ರಾಮದ ಆತನ ಮನೆಯ ಕಡೆಗೆ ಕರೆದುಕೊಂಡು ಹೋಗಿ ಮೈಯನ್ನು ಮುಟ್ಟಿ ಚುಂಬಿಸಿ ಲೈಂಗಿಕ ತೊಂದರೆ ನೀಡಿರುತ್ತಾರೆ ಎಂದು ಆರೋಪಿಸಲಾಗಿದೆ. ಆರೋಪಿ ವೈದ್ಯ ಕಳೆದ ಮೇ ತಿಂಗಳಿನಲ್ಲಿ ಮದುವೆಯಾದ ವಿಚಾರ ತಿಳಿದುಕೊಂಡು ಬಾಲಕಿ ಮೊಬೈಲ್ ಸಂಪರ್ಕ ಕಡಿತಗೊಳಿಸಿದ ಕೋಪದಿಂದ ನೀನು ಮಾತನಾಡದೆ ಇದ್ದರೆ ನಿನ್ನನ್ನು ಹಾಗೂ ನಿನ್ನ ತಂದೆ-ತಾಯಿಯನ್ನು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2020 ಕಲಂ 8, 12 Pocso act & 506 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣ ತನಿಖೆ ನಡೆಸಿದ ವಿಟ್ಲ ಪೊಲೀಸರು ವೆಸ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಡಾ. ಅನುಷ್ ನಾಯ್ಕನನ್ನು ಸೋಮವಾರ (ಜುಲೈ 11) ದಸ್ತಗಿರಿ ಮಾಡಿದ್ದಾರೆ.
0 comments:
Post a Comment