ಬಂಟ್ವಾಳ, ಜುಲೈ 26, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ನಿವಾಸಿ ಅಪ್ರಾಪ್ತ ಬಾಲಕಿಯ ಮೇಲೆ ತಂದೆಯೇ ಅತ್ಯಾಚಾರ ನಡೆಸಿದ 2020 ರ ಮಾರ್ಚ್ ತಿಂಗಳಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ತಂದೆ ಅಬ್ದುಲ್ ಅಝೀಝ್ (70) ಎಂಬಾತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಹಾಗೂ 26 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶ ಕೆ ಎಂ ರಾಧಕೃಷ್ಣ ತೀರ್ಪು ನೀಡಿದ್ದಾರೆ.
ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಪ್ರಕರಣವು ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಶಿಘ್ರ ಪಥ-2) ದಲ್ಲಿ ವಿಚಾರಣೆ ನಡದು ಈ ತೀರ್ಪು ಹೊರಬಿದ್ದಿದೆ. ನ್ಯಾಯಾಲಯಕ್ಕೆ ಸಲ್ಲಿಕೆಯಾದ ಸಾಕ್ಷ್ಯಧಾರಗಳು ಹಾಗೂ ಕೂಲಂಕುಷ ತನಿಖೆಯನ್ನು ಆಧರಿಸಿ ನ್ಯಾಯಾಲಯ ಆರೋಪಿಗೆ ಈ ಕಠಿಣ ಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೆÇಲೀಸ್ ವೃತ್ತ ನಿರೀಕ್ಷಕರಾಗಿದ್ದ ಟಿ ಡಿ ನಾಗರಾಜ್ ಅವರು ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಿ, ಆರೋಪಿಯ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸರಕಾರದ ಪರವಾಗಿ ನ್ಯಾಯಾಲಯಲ್ಲಿ ವಾದ ಮಂಡಿಸಿದ್ದರು. ವಿಟ್ಲ ಪೊಲೀಸ್ ಠಾಣಾ ಕೋರ್ಟ್ ಮಾನಿಟರಿಂಗ್ ಸೆಲ್ ಅಧಿಕಾರಿ-ಸಿಬ್ಬಂದಿಗಳು ಸಮರ್ಪಕವಾಗಿ ಪ್ರಕರಣದ ವಿಚಾರಣಾ ಹಂತಗಳನ್ನು ಫಾಲೋ ಅಪ್ ಮಾಡಿದ್ದರು. ಪರಿಣಾಮ ಆರೋಪಿ ತಂದೆಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಅತ್ಯಾಚಾರಿಗಳು ಖಡಕ್ ಸಂದೇಶ ರವಾನಿಸಿದೆ.
0 comments:
Post a Comment