ಬಿಜೆಪಿ ಕೊಲೆಯನ್ನು ರಾಜಕೀಯಕ್ಕೆ ಬಳಸುವುದನ್ನು ನಿಲ್ಲಿಸಬೇಕು : ಮಾನವ ಜೀವಕ್ಕೆ ಸಮಾನ ಬೆಲೆ ಕಲ್ಪಿಸಬೇಕು : ವಹ್ಹಾಬ್ ಕುದ್ರೋಳಿ ಆಗ್ರಹ - Karavali Times ಬಿಜೆಪಿ ಕೊಲೆಯನ್ನು ರಾಜಕೀಯಕ್ಕೆ ಬಳಸುವುದನ್ನು ನಿಲ್ಲಿಸಬೇಕು : ಮಾನವ ಜೀವಕ್ಕೆ ಸಮಾನ ಬೆಲೆ ಕಲ್ಪಿಸಬೇಕು : ವಹ್ಹಾಬ್ ಕುದ್ರೋಳಿ ಆಗ್ರಹ - Karavali Times

728x90

28 July 2022

ಬಿಜೆಪಿ ಕೊಲೆಯನ್ನು ರಾಜಕೀಯಕ್ಕೆ ಬಳಸುವುದನ್ನು ನಿಲ್ಲಿಸಬೇಕು : ಮಾನವ ಜೀವಕ್ಕೆ ಸಮಾನ ಬೆಲೆ ಕಲ್ಪಿಸಬೇಕು : ವಹ್ಹಾಬ್ ಕುದ್ರೋಳಿ ಆಗ್ರಹ

ಮಂಗಳೂರು, ಜುಲೈ 28, 2022 (ಕರಾವಳಿ ಟೈಮ್ಸ್) : ಬುದ್ದಿವಂತರ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗೆ ಪ್ರತಿ ಕೊಲೆ ಎಂಬ ಕೋಮು ವೈಷಮ್ಯದ ಕೃತ್ಯಗಳು ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಕೊಲೆಯಂತಹ ನೀಚ ಕೃತ್ಯಗಳು ಹಲವು ವರ್ಷಗಳಿಂದ ನಡೆಯುತ್ತಲೇ ಬರುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕೊಲೆಗಡುಕರ ಕೃತ್ಯಗಳನ್ನು ಧರ್ಮ-ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಅದನ್ನು ಎಂದೂ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರಲಿಲ್ಲ. ಕೊಲೆಗಾರರ ಹಾಗೂ ಕೊಲ್ಲಲ್ಪಟ್ಟವನ ಧರ್ಮವನ್ನು ನೋಡಿ ಬೇಧ ಭಾವ ಮಾಡಿದ ಇತಿಹಾಸವೇ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ ಅಭಿಪ್ರಾಯಪಟ್ಟಿದ್ದಾರೆ. 

ಬೆಳ್ಳಾರೆಯಲ್ಲಿ ವಾರದ ಅಂತರದಲ್ಲಿ ನಡೆದ ಎರಡು ಕೊಲೆಗಳ ಹಿನ್ನಲೆಯಲ್ಲಿ ಉಂಟಾಗಿರುವ ಆತಂಕದ ಪರಿಸ್ಥಿತಿಯ ಹಿನ್ನಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಿ ಜೆ ಪಿ ಪಕ್ಷ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಸಮಾಜದಲ್ಲಿ ಧರ್ಮ-ಧರ್ಮದ ಮಧ್ಯೆ ಬೇಧ ಭಾವ ಮಾಡಿ, ಕೊಲೆಗಾರ, ಕೊಲ್ಲಲ್ಪಟ್ಟವರ ಜಾತಿ ಧರ್ಮವನ್ನು ನೋಡಿ ಖಂಡನೆ, ಪ್ರತಿಭಟನೆ, ಪರಿಹಾರ ನೀಡುವ ಮೂಲಕ ಸಮಾಜದಲ್ಲಿ ಅಸಮಾನತೆಯ ವಾದವನ್ನು ಪ್ರತಿಪಾದಿಸುತ್ತಾ ವಕ್ರ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ ಎಂದಿದ್ದಾರೆ. 

ಹಿಂದೂಗಳನ್ನು ಕೊಲ್ಲಲಾಗಿದೆ, ಹಿಂದೂಗಳಿಗೆ ರಕ್ಷಣೆಯಿಲ್ಲ, ಹಿಂದೂ ಧರ್ಮ ಅಪಾಯದಲ್ಲಿದೆ, ಹಿಂದೂ ರಾಷ್ಟ್ರ, ರಾಮ ಮಂದಿರ, ಅದೂ ಇದೂ ಎಂದು ಹೇಳುತ್ತಾ ಮುಗ್ಧ ಹಿಂದುಳಿದ ಯುವಕರನ್ನು ಮುಂದೆ ಹಾಕಿ, ಗಲಭೆಗೆ ಪ್ರೇರೇಪಿಸಿ, ಅವರನ್ನು ಜೈಲಿಗೆ ತಳ್ಳಿ, ಅವರ ಜೀವನವನ್ನು ನಾಶಮಾಡಿ ನಾಯಕರು ರಾಜಾರೋಷವಾಗಿ ಹವಾ ನಿಯಂತ್ರಿತ ಕಾರಿನಲ್ಲಿ ತಿರುಗಾಡುತ್ತಿದ್ದಾರೆ.

ನಾವು ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ರಕ್ಷಣೆ ನೀಡುತ್ತೇವೆ, ಅಗತ್ಯ ಸಾಮಾನುಗಳ ಬೆಲೆಗಳನ್ನು ಇಳಿಸುತ್ತೇವೆ, ಪೆಟ್ರೋಲ್, ಗ್ಯಾಸ್ ಬೆಲೆಯನ್ನು ಕಡಿಮೆಮಾಡುತ್ತೇವೆ, ಅಚ್ಚೇ ದಿನಗಳನ್ನು ತರುತ್ತೇವೆ ಎಂದೆಲ್ಲಾ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿ ಭಾಷಣಗಳನ್ನು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿಗರು ಇದೀಗ ಎಲ್ಲಾ ಭರವಸೆಗಳನ್ನು ಮರೆತು ಕೇವಲ ನಮಗೆ ಅಧಿಕಾರ ಮುಖ್ಯ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಝಾಡಿಸಿರುವ ವಹ್ಹಾಬ್ ಬಿಜೆಪಿ ಪಕ್ಷದ, ಅದರ ನಾಯಕರ ಎಲ್ಲಾ ಘೋಷಣೆಗಳು ಸುಳ್ಳಾಗುತ್ತಿದೆ. ಜನ ಸಾಮಾನ್ಯರಿಗೆ ಬಿಜೆಪಿ ಪಕ್ಷದ ಅಧಿಕಾರ ಎಂದರೆ ಹೀಗೇನೇ ಎಂಬ ಭ್ರಮನಿರಶನ ಉಂಟಾಗಿದೆ. ಮತ್ತೊಮ್ಮೆ ಜನಪರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೆಂದು ಜನ ಆಶಿಸುವಂತಾಗಿದೆ ಎಂದಿದ್ದಾರೆ. 

ಕೊಲೆಗೀಡಾದವರು ಹಿಂದುವಾಗಿ ಮುಸ್ಲಿಮರಾಗಲಿ ಅಥವಾ ಇತರ ಯಾವುದೇ ಜಾತಿಯವರಾಗಲಿ ಸರಕಾರವು ತಕ್ಷಣ ಎಚ್ಚೆತ್ತುಕೊಂಡು ತಮ್ಮ ಮಾನವೀಯ ಮುಖದ ಬದ್ದತೆಯನ್ನು ಪ್ರದರ್ಶಿಸಬೇಕೇ ಹೊರತು ಸತ್ತವನ ಜಾತಿ-ಧರ್ಮ ಹಿನ್ನಲೆ ನೋಡಿ ಕಾರ್ಯಪ್ರವೃತ್ತರಾಗುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಬೆಳ್ಳಾರೆ ಪ್ರಕರಣದಲ್ಲಿ ಜೀವತೆತ್ತ ಎರಡೂ ಯುವಕರ ಕುಟುಂಬಗಳಿಗೆ ಸರಕಾರ ತಕ್ಷಣ ಹೆತ್ತ ಕರುಳ ಕಣ್ಣೀರಿಗೆ ಸಾಂತ್ವನದ ಸಿಂಚನ ನೀಡಬೇಕು. ಯುವ ಪುತ್ರರನ್ನು ಕಳೆದುಕೊಂಡ ಎರಡೂ ಕುಟುಂಬಗಳಿಗೂ ಸಮಾನ ರೀತಿಯಲ್ಲಿ ಪರಿಹಾರ ಬಿಡುಗಡೆ ಮಾಡಿ ಬದ್ದತೆ ಮೆರೆಯಬೇಕು ಎಂದು ವಹಾಬ್ ಕುದ್ರೋಳಿ ಆಗ್ರಹಿಸಿದರು.

ಜನ ಪ್ರಭುದ್ದರಾಗುತ್ತಿದ್ದಾರೆ. ಸ್ವಾರ್ಥ ಉದ್ದೇಶಕ್ಕಾಗಿ, ನೀಚ ಮನಸ್ಸುಗಳ ಕಠೋರತೆಗೆ ಸಾಕ್ಷಿಯಾಗುತ್ತಿರುವ ಕೊಲೆ ರಾಜಕೀಯ ಸೋಲಲಿದೆ. ಸ್ನೇಹ, ಪ್ರೀತಿ, ಸೌಹಾರ್ದ ಹಾಗೂ ಅಭಿವೃದ್ಧಿಯ ರಾಜಕೀಯ ಗೆಲ್ಲಲಿದೆ ಎಂದು ವಹಾಬ್ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿ ಕೊಲೆಯನ್ನು ರಾಜಕೀಯಕ್ಕೆ ಬಳಸುವುದನ್ನು ನಿಲ್ಲಿಸಬೇಕು : ಮಾನವ ಜೀವಕ್ಕೆ ಸಮಾನ ಬೆಲೆ ಕಲ್ಪಿಸಬೇಕು : ವಹ್ಹಾಬ್ ಕುದ್ರೋಳಿ ಆಗ್ರಹ Rating: 5 Reviewed By: karavali Times
Scroll to Top