ಬಂಟ್ವಾಳ, ಜುಲೈ 05, 2022 (ಕರಾವಳಿ ಟೈಮ್ಸ್) : ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಕ್ತ ಕೊಠಡಿ, ಕಂಪ್ಯೂಟರ್ ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ಅವಕಾಶ ಕಲ್ಪಿಸಿ ಸರಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿ ಆದೇಶ ಮಾಡಿದ ಸಂಬಂಧ, ಬಂಟ್ವಾಳ ತಾಲೂಕಿನ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ 59 ಗ್ರಾಮಗಳನ್ನು ಒಳಗೊಂಡ 35 ಗ್ರಾಮಕರಣಿಕರ ಕಛೇರಿಗಳಿಗೆ ಕಂಪ್ಯೂಟರ್, ಪ್ರಿಂಟರ್, ಹಾಗೂ ಪೀಠೋಪಕರಣ ಸೌಲಭ್ಯಕ್ಕಾಗಿ ಅನುದಾನ ಒದಗಿಸುವಂತೆ ಬಂಟ್ವಾಳ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರಿಗೆ ಸೋಮವಾರ ಬಿ ಸಿ ರೋಡಿನ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಕರಣಿಕರ ಬೇಡಿಕೆಯನ್ನು ಶೀಘ್ರ ಈಡೇರಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಅನಿಲ್ ಕೆ ಪೂಜಾರಿ, ಗೌರವಾಧ್ಯಕ್ಷ ಕುಮಾರ್ ಟಿ ಸಿ, ಉಪಾಧ್ಯಕ್ಷ ಕರಿಬಸಪ್ಪ ಜಿ ನಾಯಕ್, ಕೋಶಾಧಿಕಾರಿ ವೈಶಾಲಿ, ಕಾರ್ಯದರ್ಶಿ ರಾಜು ಲಮಾಣಿ, ಪದಾಧಿಕಾರಿಗಳಾದ ಪ್ರಕಾಶ್ ಪಿ, ಪ್ರಶಾಂತ್, ಮತ್ತಿಹಳ್ಳಿ ಪ್ರಕಾಶ್, ಆಶಾ ಮೆಹಂದಳೆ, ಅಶ್ವಿನಿ ಇದ್ದರು.
0 comments:
Post a Comment