ಮಂಗಳೂರು : ತುಳು ಅಕಾಡೆಮಿ ವತಿಯಿಂದ ನಾಟಕ ಪರ್ಬ-2022ಕ್ಕೆ ಚಾಲನೆ - Karavali Times ಮಂಗಳೂರು : ತುಳು ಅಕಾಡೆಮಿ ವತಿಯಿಂದ ನಾಟಕ ಪರ್ಬ-2022ಕ್ಕೆ ಚಾಲನೆ - Karavali Times

728x90

19 July 2022

ಮಂಗಳೂರು : ತುಳು ಅಕಾಡೆಮಿ ವತಿಯಿಂದ ನಾಟಕ ಪರ್ಬ-2022ಕ್ಕೆ ಚಾಲನೆ

ಮಂಗಳೂರು, ಜುಲೈ 19, 2022 (ಕರಾವಳಿ ಟೈಮ್ಸ್) : ಕಲೆಯ ಮೂಲಕ ಭಾಷೆಯು ಉಳಿಯುತ್ತದೆ, ಕಲಾವಿದ ಬೆಳೆಯುತ್ತಾನೆ. ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ನಾಟಕ ಪರ್ಬ-2022 ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದಲ್ಲಿ ಆರಂಭಗೊಂಡ ತುಳು ನಾಟಕ ಪರ್ಬ-2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತುಳು ಭಾಳೆಯನ್ನು ಉಳಿಸುವ ಬೆಳೆಸುವ ಮತ್ತು ಕಲಾವಿದರಿಗೆ ಆಶ್ರಯವನ್ನು ನೀಡುವಂತಹ ಹಲವಾರು ಕಾರ್ಯಕ್ರಮಗಳನ್ನು ತುಳು ಸಾಹಿತ್ಯ ಅಕಾಡೆಮಿ ಹಮ್ಮಿಕೊಳ್ಳುತ್ತಿದೆ.  ಸಮಸ್ತ ತುಳುವರು ಇಂತಹ ಕಾರ್ಯಕ್ರಮಗಳೊಂದಿಗೆ ಕಲೆಯನ್ನು ಉಳಿಸುವ ಕೆಲಸದ ಜೊತೆ ಕೈ ಜೋಡಿಸಬೇಕಾಗಿದೆ ಎಂದರು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‍ಸಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸಿ ಕೊಡಬೇಕು. ಆ ಮೂಲಕ ಕಲೆಯೊಂದಿಗೆ ಕಲಾವಿದನ ಪ್ರತಿಭೆಯನ್ನು ತೋರಿಸುವ ವೇದಿಕೆಯನ್ನು ನಿರ್ಮಿಸಬೇಕು ಎನ್ನುವ ಕಾರಣಕ್ಕಾಗಿ ಮಹಾನಗರ ಪಾಲಿಕೆಯ ಸಂಪೂರ್ಣ ಸಹಕಾರದೊಂದಿಗೆ ತುಳು ನಾಟಕ ಪರ್ಬ-2022ನ್ನು ಆಯೋಜಿಸಲಾಗಿದೆ. 7 ದಿನಗಳಲ್ಲಿ ಸುಮಾರು 8 ತಂಡಗಳ ವಿವಿಧ ನಾಟಕಗಳ ಪ್ರದರ್ಶನ ಅದರೊಂದಿಗೆ ಕಲೆಗಾಗಿ, ರಂಗಭೂಮಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಕಲಾ ಮಾತೆಯ ಮಡಿಲು ಸೇರಿದ ಕಲಾವಿದರ ಹೆಸರನ್ನು ವೇದಿಕೆಗೆ ಇರಿಸಿ ಆ ಮೂಲಕ ಅವರನ್ನು ಸ್ಮರಿಸಿಕೊಳ್ಳಲಾಗುತ್ತದೆ. 7 ದಿನಗಳಲ್ಲಿ ಸುಮಾರು 23 ಮಂದಿ ರಂಗಭೂಮಿಯ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು. 

ಇದೇ ವೇಳೆ ರಂಗಭೂಮಿ ಕಲಾವಿದರಾದ ಸುನೀತಾ ಎಕ್ಕೂರು ಹಾಗೂ ವಾಸುದೇವ ಲಾಯಿಲಾ, ರಘುರಾಮ ಶೆಟ್ಟಿ ಬೆಳ್ತಂಗಡಿ ಅವರನ್ನು ಸನ್ಮಾನಿಸಲಾಯಿತು. ನವರಸ ಕಲಾವಿದೆರ್, ಓಂ ಶಕ್ತಿ ಗೆಳೆಯರ ಬಳಗ ಲಾಯಿಲ, ಬೆಳ್ತಂಗಡಿ ತಂಡದಿಂದ “ತುಂಗಭದ್ರಾ” ನಾಟಕ ಪ್ರದರ್ಶನಗೊಂಡಿತು.  

ನಮ್ಮ ಟೀವಿ ನಿರ್ದೇಶಕ ಡಾ ಶಿವಶರಣ್ ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ, ಸೀತಾರಾಮ ಹೆಗ್ಡೆ, ಸದಾಶಿವ ಕುಕ್ಯಾನ, ಮಹಾನಗರ ಪಾಲಿಕೆಯ ಸದಸ್ಯರಾದ ಶಕೀಲಾ ಕಾವ, ಗಣೇಶ್ ಕುಲಾಲ್ ಕೋಡಿಕಲ್, ಅಕಾಡೆಮಿ ರಿಜಿಸ್ಟ್ರಾರ್ ಕವಿತಾ, ಅಕಾಡೆಮಿ ಸದಸ್ಯರಾದ ನರೇಂದ್ರ ಕೆರೆಕಾಡು, ಪಿ.ಎಂ ರವಿ, ನಾಗೇಶ್ ಕುಲಾಲ್, ಮೊದಲಾದವರು ಉಪಸ್ಥಿತರಿದ್ದರು. ಕಡಬ ದಿನೇಶ್ ರೈ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ತುಳು ಅಕಾಡೆಮಿ ವತಿಯಿಂದ ನಾಟಕ ಪರ್ಬ-2022ಕ್ಕೆ ಚಾಲನೆ Rating: 5 Reviewed By: karavali Times
Scroll to Top