ಸುಳ್ಯ, ಜುಲೈ 03, 2022 (ಕರಾವಳಿ ಟೈಮ್ಸ್) : ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕಯೋಳ್ತಡ್ಕ ಎಂಬಲ್ಲಿ ಐದು ವರ್ಷದ ಬಾಲಕ ಮುಹಮ್ಮದ್ ಆದಿಲ್ ತನ್ನ ಅಜ್ಜಿ ಮನೆಯಲ್ಲಿ ಆಟವಾಡುತ್ತಾ ಫ್ರಿಡ್ಜ್ ಮುಟ್ಟಿದ ವೇಳೆ ಆಕಸ್ಮಿಕ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಶನಿವಾರ (ಜುಲೈ 2) ಮಧ್ಯಾಹ್ನ ನಡೆದಿದೆ.
ಪುತ್ತೂರು ತಾಲೂಕು, ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡ ಮನೆ ನಿವಾಸಿ ಹೈದರಾಲಿ (32) ಹಾಗೂ ಅಪ್ಸ ದಂಪತಿಯ ಪುತ್ರನಾಗಿರುವ ಬಾಲಕ ಆದಿಲ್ ಐದು ದಿನಗಳ ಹಿಂದೆ ತನ್ನ ತಾಯಿಯ ಜೊತೆ ಅಜ್ಜಿ ಮನೆಯಾಗಿರುವ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕೈಯೋಲ್ಲಡ್ಕಕ್ಕೆ ಬಂದಿದ್ದು, ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಮನೆಯಲ್ಲಿ ಆಟವಾಡುತ್ತಾ ಪ್ರಿಡ್ಜ್ ಬಳಿ ಹೋದ ಮಹಮ್ಮದ್ ಆದಿಲ್ ಪ್ರಿಡ್ಜ್ ನ್ನು ಮುಟ್ಟಿದಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಅಲ್ಲೇ ಬಿದ್ದು ಅಸ್ವಸ್ಥಗೊಂಡಿದ್ದಾನೆ.
ತಕ್ಷಣ ಆತನನ್ನು ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಬಗ್ಗೆ ಬಾಲಕನ ತಂದೆ ಹೈದರಾಲಿ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯ 19/2022 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment